ಕ್ರೀಡೆ

ಆ್ಯಂಡಿ ಮರ್ರೆ ನಿವೃತ್ತಿ: ಲೆಜೆಂಡ್ ಆಟಗಾರನಿಗೆ ಟೆನ್ನಿಸ್ ಲೋಕದ ದಿಗ್ಗಜರಿಂದ ಹೃದಯ ಸ್ಪರ್ಶಿ ವಿದಾಯ

ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಣೆ ಮಾಡಿಗ ಬ್ರಿಟೀಷ್ ಲೆಜೆಂಡ್ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರು ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ.

ಆ್ಯಂಡಿ ಮರ್ರೆ ನಿವೃತ್ತಿ: ಲೆಜೆಂಡ್ ಆಟಗಾರನಿಗೆ ಟೆನ್ನಿಸ್ ಲೋಕದ ದಿಗ್ಗಜರಿಂದ ಹೃದಯ ಸ್ಪರ್ಶಿ ವಿದಾಯ
ಸಂಗ್ರಹ ಚಿತ್ರ
Published On :
ಸಿಡ್ನಿ: ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಣೆ ಮಾಡಿಗ ಬ್ರಿಟೀಷ್ ಲೆಜೆಂಡ್ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರು ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ.
ಮೆಲ್ಬೋರ್ನ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ಆ್ಯಂಡಿ ಮರ್ರೆ ಸೋತರಾದರೂ, ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆ ಅಭಿಮಾನಿಗಳ ಮನ ಗೆದ್ದರು. ಪಂದ್ಯದ ನಡುವೆ ಸೊಂಟದ ನೋವಿಗೆ ತುತ್ತಾದರೂ ದೃತಿಗೆಡದ ಮರ್ರೆ ಯಾವುದೇ ಕಾರಣಕ್ಕೂ ಸೊಲೊಪ್ಪಿಕೊಳ್ಳದೇ ಪಂದ್ಯದ ಅಂತಿಮ ಕ್ಷಣದ ವರೆಗೂ ತಮ್ಮ ಹೋರಾಟ ಮುಂದುವರೆಸಿದರು. 
ಪಂದ್ಯ ಮುಕ್ಚಾಯದ ಬಳಿಕ ಇಡೀ ಕ್ರೀಡಾಂಗಣವೇ ಎದ್ದು ನಿಂತು ಮರ್ರೆಗೆ ಗೌರವ ಸಲ್ಲಿಸಿದ ಬಗೆ ಅವರ ವೃತ್ತಿಜೀವನಕ್ಕೆ ಸಲ್ಲಿಸಿದ ಗೌರವವಾಗಿತ್ತು. ಇನ್ನು ಮರ್ರೆ ಅವರ ಅಂತಿಮ ಪಂದ್ಯಕ್ಕೆ ಅವರ ತಾಯಿ ಮತ್ತು ಸಹೋದರ ಸಾಕ್ಷಿಯಾಗಿದ್ದರು. ಅಂತೆಯೇ ಪಂದ್ಯ ಮುಕ್ತಾಯದ ಬಳಿಕ ಟೆನ್ನಿಸ್ ಲೆಜೆಂಡ್ ಆಟಗಾರರಾದ ನುವಾಕ್ ಜೋಕೋವಿಕ್, ರಾಫೆಲ್ ನಡಾಲ್, ರೋಜರ್ ಫೆಡರರ್ ಸೇರಿದಂತೆ ಟೆನ್ನಿಸ್ ಲೋಕದ ಘಟಾನುಘಟಿ ದಿಗ್ಗಜ ಆಟಗಾರರು ಮರ್ರೆ ಅವರಿಗೆ ಶುಭ ಕೋರಿದರು.
ಅಂತಾರಾಷ್ಟ್ರೀಯ ಟೆನ್ನಿಸ್ ಸಂಸ್ಥೆ ಈ ವಿಡಿಯೋ ಮಾಡಿ ಕ್ರೀಡಾಂಗಣದಲ್ಲಿ ಪ್ರಸಾರ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.