ಕ್ರೀಡೆ

ದಕ್ಷಿಣ ಏಷ್ಯನ್ ಕ್ರೀಡಾಕೂಟ : 312 ಪದಕಗಳೊಂದಿಗೆ ಭಾರತ ಅಭಿಯಾನ ಅಂತ್ಯ

ಮಂಗಳವಾರ ಮುಕ್ತಾಯವಾದ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 312 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿತು.

ದಕ್ಷಿಣ ಏಷ್ಯನ್ ಕ್ರೀಡಾಕೂಟ : 312 ಪದಕಗಳೊಂದಿಗೆ ಭಾರತ ಅಭಿಯಾನ ಅಂತ್ಯ
ದಕ್ಷಿಣ ಏಷ್ಯನ್ ಕ್ರೀಡಾಕೂಟ : 312 ಪದಕಗಳೊಂದಿಗೆ ಭಾರತ ಅಭಿಯಾನ ಅಂತ್ಯ
Published On :

ಕಠ್ಮಂಡು: ಮಂಗಳವಾರ ಮುಕ್ತಾಯವಾದ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 312 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿತು.

ಭಾರತ 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನ ಪದಕಗಳು ಸೇರಿದಂತೆ ಒಟ್ಟು 312 ಪಂದಕಗಳೊಂದಿಗೆ ಅಗ್ರ ಸ್ಥಾನದೊಂದಿಗೆ ತನ್ನ ಓಟ ಅಂತ್ಯಗೊಳಿಸಿತು. ಇದರೊಂದಿಗೆ ಭಾರತದಲ್ಲಿ ನಡೆದಿದ್ದ ಕಳೆದ 2016ರ ಆವೃತ್ತಿಯಲ್ಲಿ ಗಳಿಸಿದ್ದ (309) ಒಟ್ಟು ಪದಕಗಳಿಗಿಂತ ಈ ಬಾರಿ ಮೂರು ಪದಕಗಳನ್ನು ಹೆಚ್ಚು ಪಡೆಯಿತು. 2016ರ ಆವೃತ್ತಿಯಲ್ಲಿ ಗೆದ್ದಿದ್ದ ಚಿನ್ನಗಳಿಗಿಂತ ಈ ಬಾರಿ 15 ಕಡಿಮೆಯಾಗಿದೆ. ಈ ಕ್ರೀಡಾಕೂಟಕ್ಕೆೆ ಭಾರತ 487 ಅಥ್ಲಿಟ್‌ಗಳನ್ನು ಕಳುಹಿಸಿತ್ತು.

ನೇಪಾಳ 51 ಚಿನ್ನ, 60 ಬೆಳ್ಳಿ ಹಾಗೂ 95 ಕಂಚಿನ ಪದಕಗಳು ಸೇರಿದಂತೆ ಒಟ್ಟು 206 ಪದಕಗಳೊಂದಿಗೆ ಎರಡನೇ ಸ್ಥಾನದೊಂದಿಗೆ ಅಭಿಯಾನಿ ಮುಗಿಸಿತು. 251 ಪದಕಗಳೊಂದಿಗೆ (40 ಚಿನ್ನ, 83 ಬೆಳ್ಳಿ ಹಾಗೂ 128 ಕಂಚು) ಶ್ರೀಲಂಕಾ ಮೂರನೇ ಸ್ಥಾನ ಪಡೆಯಿತು. 1984 ರಿಂದ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪ್ರತಿವರ್ಷ ಅಗ್ರ ಸ್ಥಾನದಲ್ಲೇ ಮುಂದುವರಿದಿದೆ

ಹತ್ತನೇ ಹಾಗೂ ಅಂತಿಮ ದಿನವಾದ ಮಂಗಳವಾರ ಭಾರತ ಒಟ್ಟೂ ೧೮ ಪದಕಗಳನ್ನು ಜಯಿಸಿದೆ. ಅದರಲ್ಲಿ ೧೫ ಚಿನ್ನ, ೨ ಬೆಳ್ಳಿ ಹಾಗೂ ಒಂದು ಕಂಚೊನ ಪದಕಗಳು ಸೇರಿದೆ. 

ಭಾರತೀಯ ಬಾಸ್ಕರ್ ಗಳು ೬ ಚಿನ್ನ, ಒಂದು ಬೆಳ್ಳಿ ಪದಕ ಜಯಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.