ಕ್ರೀಡೆ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ ಸೇರಿ 4 ಪದಕಗಳ ಹಾರ

13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಪ್ರಾರಂಭಿಕ ದಿನವಾದ ಸೋಮವಾರ ಟ್ರಯಥ್ಲಾನ್ ಪಂದ್ಯಾವಳಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗಳಿಸುವುದರೊಡನೆ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ.

ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ ಸೇರಿ 4 ಪದಕಗಳ ಹಾರ
ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ,ಸೇರಿ 4 ಪದಕಗಳ ಹಾರ
Published On :

ಪೋಖರಾ(ನೇಪಾಳ): 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಪ್ರಾರಂಭಿಕ ದಿನವಾದ ಸೋಮವಾರ  ಟ್ರಯಥ್ಲಾನ್ ಪಂದ್ಯಾವಳಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು  ಒಂದು ಕಂಚಿನ ಪದಕಗಳನ್ನು ಗಳಿಸುವುದರೊಡನೆ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ.

ಪುರುಷರ ವೈಯಕ್ತಿಕ ಟ್ರಯಥ್ಲಾನ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಆದರ್ಶ ಎಂ.ಎನ್. ಸಿನಿಮೋಲ್ ಭಾರತಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟರೆ ಬಿಶ್ವರ್ಜಿತ್ ಶ್ರೀಖೋಮ್ ಬೆಳ್ಳಿ ಪದಕ ಗಳಿಸಿದ್ದಾರೆ.

ಮಹಿಳೆಯರ ವೈಯಕ್ತಿಕ ಪಂದ್ಯಾವಳಿಯಲ್ಲಿ ತೌದಮ್ ಸೊರೋಜಿನಿ ದೇವಿ ಮತ್ತು ಮೋಹನ್ ಪ್ರಜ್ಞಾ ಕ್ರಮವಾಗಿ ತಲಾ ಒಂದೊಂದು ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.  

ಕ್ರೀಡಾಕೂಟದಲ್ಲಿ  15 ಕ್ಕೂ ಹೆಚ್ಚು ವಿಭಾಗಗಳಲ್ಲಿ 487 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.