ಪಾಕಿಸ್ತಾನ ವಿರುದ್ಧ ಡೆವಿಸ್ ಕಪ್ ಗೆಲುವನ್ನು ಸೇನೆಗೆ ಅರ್ಪಿಸಿದ ಸುಮಿತ್ ನಗಾಲ್
ಪಾಕಿಸ್ತಾನ ವಿರುದ್ಧದ ಡೆವಿಸ್ ಕಪ್ ಗೆಲುವನ್ನು ಭಾರತ ತಂಡದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.

ನವದೆಹಲಿ: ಪಾಕಿಸ್ತಾನ ವಿರುದ್ಧದ ಡೆವಿಸ್ ಕಪ್ ಗೆಲುವನ್ನು ಭಾರತ ತಂಡದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನದಲ್ಲಿ ಕೇವಲ ಏಳು ಗೇಮ್‍ಗಳನ್ನು ಮಾತ್ರ ಬಿಟ್ಟುಕೊಟ್ಟಿತ್ತು. ಇನ್‍ಸ್ಟಾಗ್ರಾಮ್ ನಲ್ಲಿ ತಂಡದ ಫೋಟೊ ಶೇರ್ ಮಾಡಿರುವ ಸುಮಿತ್, "ಈ ಗೆಲುವು ತಮ್ಮ ಜೀವನವನ್ನು ಕೈಯಲ್ಲಿಟ್ಟುಕೊಂಡು ನಮ್ಮನ್ನು ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಣೆ." ಎಂದು ಶಿರ್ಷಿಕೆ ಬರೆದಿದ್ದಾರೆ.
ಪಾಕಿಸ್ತಾನ ವಿರುದ್ಧ 4-0 ಅಂತರದಲ್ಲಿ ಗೆಲುವು ಪಡೆದಿರುವ ಈ ವಾರ ಎಂತಹ ಅತ್ಯುತ್ಸಾಹಿಕವಾಗಿದೆ. ಪಂದ್ಯವೀಡಿ ಕೇವಲ 7 ಗೇಮ್‍ಗಳಲ್ಲಿ ನಾವು ಸೋಲು ಅನುಭವಿಸಿದ್ದೆವು. ತಂಡದಲ್ಲಿ ಇರುವವರೆಲ್ಲರೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
ತಾನು ಡೆವಿಸ್ ಕಪ್ ಚೊಚ್ಚಲ ಪಂದ್ಯದಲ್ಲೇ ಗೆಲುವು ಸಿಕ್ಕಿದೆ. ಇದಕ್ಕೆ ಅವಕಾಶ ಕಲ್ಪಿಸಿ ಸಹಕರಿಸಿದ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ." ಎಂದು ಸುಮಿತ್ ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


