ಪ್ರೊಕಬಡ್ಡಿ ಲೀಗ್ 2019: ತಮಿಳ್ ತಲೈವಾಸ್ ಸೋಲಿನ ಪಾಠ ಮಾಡಿದ ಬೆಂಗಳೂರು ಬುಲ್ಸ್!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೆ ಘರ್ಜಿಸಿದ್ದು, ತಮಿಳ್ ತಲೈವಾಸ್ ತಂಡವನ್ನು ಅವರ ತವರಿನಲ್ಲೇ ಮಣಿಸುವ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ.

ತವರಿನಲ್ಲೇ ಬೆಂಗಳೂರು ವಿರುದ್ಧ ತಲೆಬಾಗಿದ ತಮಿಳ್ ತಲೈವಾಸ್, 32-21 ಅಂಕಗಳ ಅಂತರದ ಭರ್ಜರಿ ಜಯ
ಚೆನ್ನೈ: ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೆ ಘರ್ಜಿಸಿದ್ದು, ತಮಿಳ್ ತಲೈವಾಸ್ ತಂಡವನ್ನು ಅವರ ತವರಿನಲ್ಲೇ ಮಣಿಸುವ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ತಮಿಲ್ ತಲೈವಾಸ್ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ಬುಲ್ಸ್ ತಂಡ 32-21 ಅಂಕಗಳ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಬೆಂಗಳೂರು ಈ ಬಾರಿಯೂ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಇನ್ನು ಮೊದಲಾರ್ಧದಲ್ಲೇ ಅಬ್ಬರಿಸಿದ ಬೆಂಗಳೂರು ತಂಡದ ಆಟಗಾರರು ಕೇವಲ ಆರಂಭಿಕ 5 ನಿಮಷದಲ್ಲಿ ಅಂಕ ಬಾಚಿಕೊಂಡರೆ, ಇತ್ತ ತಮಿಳ್ ತಲೈವಾಸ್ ಒಂದೂ ಅಂಕವನ್ನು ಗಳಿಸಲಿಲ್ಲ. 7-0 ಮುನ್ನಡೆ ಸಾಧಿಸಿದ ಬೆಂಗಳೂರು 6ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ತಂಡವನ್ನು ಆಲೌಟ್ ಮಾಡಿತು. ಈ ಮೂಲಕ 10-1 ಅಂಕಗಳ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಅಂತ್ಯದ ವೇಳೆಗೆ ತಮಿಳ್ ತಲೈವಾಸ್ ಚುರುಕಿನ ಆಟವಾಡಿತು.
ಅಷ್ಟರಲ್ಲೇ ಬೆಂಗಳೂರು ಭಾರಿ ಮುನ್ನಡೆ ಪಡೆದುಕೊಂಡಿತ್ತು. ಹೀಗಾಗಿ ಬುಲ್ಸ್ 17-10 ಅಂಕದೊಂದಿಗೆ ಮೊದಲಾರ್ಧ ಅಂತ್ಯಗೊಳಿಸಿತು. ಇನ್ನು ದ್ವಿತೀಯಾರ್ಧದಲ್ಲಿ ಬೆಂಗಳೂರು ಹೋರಾಟ ಮುಂದುವರಿಸಿತು. ಇತ್ತ ತಮಿಳ್ ತಲೈವಾಸ್ ಮುನ್ನಡೆಗಾಗಿ ಹರಸಾಹಸ ಪಟ್ಟರೂ ಆ ತಂಡದ ಯೋಜನೆಗಳು ಯಾವುದೂ ಕೈಗೂಡಲಿಲ್ಲ. ಪಂದ್ಯ ಮುಕ್ತಾಯದ ವೇಳೆ ಬೆಂಗಳೂರುು 32-21 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಆ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವು ಸಾಧಿಸಿ ಟೂರ್ನಿಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


