ಐಎಸ್ಎಸ್ಎಫ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ, ಒಲಂಪಿಕ್‍ಗೆ ಅರ್ಹತೆ ಪಡೆದ ಭಾರತೀಯ ಶೂಟರ್
ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.

Published On :
ಬೀಜಿಂಗ್: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.
ವರ್ಮಾ ಪಾಲಿಗೆ ಇದು ಎರಡನೇ ಶೂಟಿಂಗ್ ವಿಶ್ವಕಪ್ ಆಗಿತ್ತು. ವರ್ಮಾ ಫೈನಲ್ ಸುತ್ತಿನಲ್ಲಿ 242.7 ಅಂಕಗಳಿಸಿ ಈ ಸಾಧನೆ ಮಾಡಿದ್ದಾರೆ.
ಇನ್ನು ಇದೇ ವಿಭಾಗದಲ್ಲಿ ರಷ್ಯಾದ ಆರ್ಟೆಮ್ ಚೆರ್ನೌಸೊವ್ 240.4 ಅಂಕಗಳೊಂದಿಗೆ ಬೆಳ್ಳಿ, ಕೊರಿಯಾದ ಹಾನ್ ಸಿಯುಂಗ್ ವೂ 220.0 ಅಂಕದೊಂದಿಗೆ ಕಂಚಿನ ಪದಕವನ್ನು ಪಡೆದರು
2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದ ಅಭಿಷೇಕ್ ವರ್ಮಾ ಈ ಚಿನ್ನದೊಡನೆ ಟೋಕಿಯೋದಲ್ಲಿ ನಡೆಯಲಿರುವ 2020 ರ ಒಲಂಪಿಕ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆಇದ್ದಾರೆ.
ಇದಲ್ಲದೆ ಬಾರತದ 10 ಮಿ ಏರ್ ರೈಫಲ್ ಶೂಟರ್ ದಿವ್ಯಾನ್ಶ್ ಸಿಂಗ್ ಹಾಗೂ ಸೌರಭ್ ಚೌಧರಿ ಸಹ ಒಲಂಪಿಕ್ ಅರ್ಹತೆ ಪಡೆದುಕೊಂಡಿದ್ದರು. ಮಹಿಳೆಯರಲ್ಲಿ, ಅಂಜುಮ್ ಮೌಡ್ಗಿಲ್ ಮತ್ತು ಅಪೂರ್ವಿ ಚಾಂಡೇಲಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಒಲಂಪಿಕ್ ಗೆ ಅರ್ಹತೆ ಪಡೆಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ISSF World CupAbhishek Vermaಅಭಿಷೇಕ್ ವರ್ಮಾ10m Air Pistolಐಎಸ್ಎಸ್ಎಫ್ ವಿಶ್ವಕಪ್Olympic quota10 ಮೀ ಏರ್ ಪಿಸ್ತೋಲ್ಒಲಿಂಪಿಕ್ ಕೋಟಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


