ಅರ್ಚರಿ ವಿಶ್ವಕಪ್ ಫೈನಲ್ಸ್ : ದೀಪಿಕಾ ಕುಮಾರಿಗೆ ಕಂಚಿನ ಪದಕ !
ಅರ್ಚರಿ ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಜರ್ಮನಿಯ ಲಿನಾ ಉನ್ರಾ ರನ್ನು ಸೋಲಿಸಿದ ಭಾರತದ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

Published On :
ಸ್ಯಾಮ್ ಸನ್ :ಅರ್ಚರಿ ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಜರ್ಮನಿಯ ಲಿನಾ ಉನ್ರಾ ರನ್ನು ಸೋಲಿಸಿದ ಭಾರತದ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಕೊನೆಯ ಹಂತದಲ್ಲಿ ಇಬ್ಬರು ಆಟಗಾರರು 5-5 ಸೆಟ್ ಗಳಿಂದ ಪಂದ್ಯ ಟೈ ಆದ ಕಾರಣ ಶೂಟ್ ಅಪ್ ಅಗತ್ಯವಾಗಿತ್ತು. ಕುಮಾರಿ ಮತ್ತು ಉನ್ರಾ ಇಬ್ಬರು 9 ಶೂಟ್ ಗಳನ್ನು ಪಡೆದರು. ಆದರೆ, ಕುಮಾರಿ ಬಿಟ್ಟ ಬಾಣ ಕೇಂದ್ರದ ಸಮೀಪದಲ್ಲಿ ಬಿದ್ದರಿಂದ ಕಂಚಿನ ಪದಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದು ವಿಶ್ವಕಪ್ ಪೈನಲ್ಸ್ ಪಂದ್ಯದಲ್ಲಿ ಕುಮಾರಿ ಪಡೆದಿರುವ ಐದನೇ ಪ್ರಶಸ್ತಿಯಾಗಿದೆ.
ಐದನೇ ಸೆಟ್ ನಲ್ಲಿ ಉಭಯ ಆಟಗಾರರ ತೀವ್ರ ಪೈಪೋಟಿಯಿಂದ ಪಂದ್ಯ ಡ್ರಾನತ್ತ ಸಾಗಿತ್ತು. ಆದರೆ. ತರಬೇತಿದಾರರ ಅನುಪಸ್ಥಿತಿಯಲ್ಲಿ ದೀಪಿಕಾ ಕುಮಾರಿ ಪ್ರಬಲ ಆಟ ಪ್ರದರ್ಶಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


