ಜೀವದ ಜೊತೆ ಹೋರಾಡುತ್ತಿದ್ದ ಆಟಗಾರನನ್ನು ರಕ್ಷಿಸಲು ಕೆಟ್ಟು ನಿಂತಿದ್ದ ಆ್ಯಂಬುಲೆನ್ಸ್ ತಳ್ಳಿದ ಫುಟ್ಬಾಲಿಗರು!
ವಿದೇಶಗಳಲ್ಲಿ ಫುಟ್ಬಾಲ್ ಆಟದ ಕ್ರೇಜ್ ಎಷ್ಟಿದೆ ಅಂದರೆ ಪಂದ್ಯಗಳ ವೇಳೆ ಎರಡೂ ತಂಡಗಳ ಆಟಗಾರರು ಪರಸ್ಪರ ಬಡಿದಾಡಿಕೊಂಡು ಸಾಯುವುದು ಮಾಮೂಲು...

Published On :
ಬ್ರೆಜಿಲ್: ವಿದೇಶಗಳಲ್ಲಿ ಫುಟ್ಬಾಲ್ ಆಟದ ಕ್ರೇಜ್ ಎಷ್ಟಿದೆ ಅಂದರೆ ಪಂದ್ಯಗಳ ವೇಳೆ ಎರಡೂ ತಂಡಗಳ ಆಟಗಾರರು ಪರಸ್ಪರ ಬಡಿದಾಡಿಕೊಂಡು ಸಾಯುವುದು ಮಾಮೂಲು.
ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸಹ ಆಟಗಾರನ ಪ್ರಾಣ ರಕ್ಷಿಸಲು ಕ್ರೀಡಾಂಗಣದಲ್ಲೇ ಫುಟ್ಬಾಲಿಗರು ಕೆಟ್ಟು ನಿಂತಿದ್ದ ಆ್ಯಂಬುಲೇನ್ಸ್ ತಳ್ಳಿದ ಅಪರೂಪದ ಘಟನೆ ನಡೆದಿದೆ.
ಬ್ರೆಜಿಲ್ ನ ಲೀಗ್ ಪಂದ್ಯವೊಂದರಲ್ಲಿ ಫ್ಲೆಮಿಂಗೋ ಹಾಗೂ ವಾಸ್ಕೋ ಡಿ ಗಾಮ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ವಾಸ್ಕೋ ತಂಡದ ಬ್ರುನೋ ಸಿಲ್ವಾ ಎಂಬ ಆಟಗಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ತಕ್ಷಣವೇ ಮೈದಾನಕ್ಕೆ ಆಗಮಿಸಿದ ಆ್ಯಂಬುಲೆನ್ಸ್ ನಲ್ಲಿ ಆತನನ್ನು ಮಲಗಿಸಲಾಯಿತು. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಆ್ಯಂಬುಲೆನ್ಸ್ ಸ್ಟಾರ್ಟ್ ಆಗದೇ ಕೈಕೊಟ್ಟಿದೆ. ಆಗ ಡ್ರೈವರ್ ಸೂಚನೆ ಮೇರೆಗೆ ಎರಡೂ ತಂಡಗಳ ಆಟಗಾರರು ಬಂದು ಆ್ಯಂಬುಲೆನ್ಸ್ ತಳ್ಳಿ ಸ್ಟಾರ್ಟ್ ಆಗುವಂತೆ ಮಾಡಿದರು. ಸದ್ಯ ಆಟಗಾರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


