ಏಷ್ಯನ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಗೆ ಕ್ರೀಡಾ ಇಲಾಖೆಯಿಂದ ಅಡಿಡಾಸ್ ಶೂ
ಏಷ್ಯನ್ ಗೇಮ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ...

ನವದೆಹಲಿ: ಏಷ್ಯನ್ ಗೇಮ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಅಡಿಡಾಸ್ ಕಂಪೆನಿಯ ಶೂವನ್ನು ಭಾರತೀಯ ಕ್ರೀಡಾ ಇಲಾಖೆ ಒದಗಿಸಲಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಅಡಿಡಾಸ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ವಿಶೇಷವಾದ ಶೂವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದೆ.
ಸ್ವಪ್ನ ಅವರ ಸಮಸ್ಯೆಯನ್ನು ತಿಳಿದುಕೊಂಡ ಕ್ರೀಡಾ ಸಚಿವರು ಕೂಡಲೇ ಅವರಿಗೆ ವಿಶೇಷ ಶೂ ಒದಗಿಸುವಂತೆ ನಮಗೆ ಆದೇಶ ನೀಡಿದರು. ನಾವು ಅಡಿಡಾಸ್ ಕಂಪೆನಿಯನ್ನು ಕೇಳಿಕೊಂಡಿದ್ದು ಅವರು ನಮಗೆ ಶೂ ಒದಗಿಸಲು ಮುಂದೆ ಬಂದಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ನೀಲಮ್ ಕಪೂರ್ ತಿಳಿಸಿದ್ದಾರೆ.
ಎರಡೂ ಕಾಲುಗಳಲ್ಲಿ ಆರು ಕಾಲು ಬೆರಳುಗಳನ್ನು ಹೊಂದಿರುವ ಸ್ವಪ್ನ ಬರ್ಮನ್ ಅವರಿಗೆ ಇತರ ಕ್ರೀಡಾಪಟುಗಳು ಬಳಸುವ ಶೂಗಳನ್ನೇ ಆರಂಭದಲ್ಲಿ ನೀಡಲಾಗಿತ್ತು. ಆದರೆ ಅವರಿಗೆ ಅದನ್ನು ಧರಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಕಷ್ಟವಾಗಿತ್ತು. ಈ ಸಮಸ್ಯೆ ಕ್ರೀಡಾ ಪ್ರಾಧಿಕಾರದ ಗಮನಕ್ಕೆ ಬಂದಿದ್ದು ಕಳೆದ ತಿಂಗಳು ಜಕಾರ್ತದಲ್ಲಿ ಏಷ್ಯನ್ ಗೇಮ್ಸ್ ನ 18ನೇ ಆವೃತ್ತಿಯಲ್ಲಿ ಹೆಪ್ಟಾಥ್ಲೀಟ್ ವಿಭಾಗದಲ್ಲಿ ಸ್ವಪ್ನ ಚಿನ್ನದ ಪದಕ ಗಳಿಸಿದ್ದಾಗಲೇ. ಅವರು ಹೆಪ್ಟಾಥ್ಲೀಟ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ತನ್ನ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಭಾವಪರವಶರಾಗಿ ಮಾತನಾಡಿದ್ದ ಸ್ವಪ್ನ ತನಗೆ ವಿಶೇಷ ಶೂ ಒದಗಿಸುವಂತೆ ಮನವಿ ಮಾಡಿದ್ದರು. ವಿಷಯ ಗಮನಕ್ಕೆ ಬಂದ ಕೂಡಲೇ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಸೂಚಿಸಿದ್ದರು.
ಕ್ರೀಡಾ ಪ್ರಾಧಿಕಾರ ಕೋಲ್ಕತ್ತಾದಲ್ಲಿರುವ ಸ್ವಪ್ನ ಅವರ ಕೋಚ್ ಗೆ, ಅವರ ಪಾದದ ಅಳತೆ, ಪ್ರೆಶರ್ ಪಾಯಿಂಟ್ ಮತ್ತು ಸಾಂಪ್ರದಾಯಿಕ ಸ್ಪೈಕ್ ನ್ನು ತಿಳಿಸುವಂತೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


