ಶೂಟಿಂಗ್ ಚಾಂಪಿಯನ್ ಶಿಪ್: ವಿಶ್ವ ದಾಖಲೆ ಬರೆದ ಸೌರಭ್‍ಗೆ ಬಂಗಾರದ ಪದಕ!
ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯ ಜೂನಿಯರ್....

Published On :
ಚಾಂಗ್‍ವೊನ್(ದಕ್ಷಿಣ ಕೊರೊಯಾ): ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯ ಜೂನಿಯರ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸೌರಭ್ ಅಂತಿಮ ಸುತ್ತಿನಲ್ಲಿ 245.5 ಅಂಕ ಗಳಿಸಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಇದೇ ವಿಭಾಗದಲ್ಲಿ ಭಾರತದ ಇನ್ನೋರ್ವ ಶೂಟರ್ ಅರ್ಜುನ್ ಸಿಂಗ್ ಚೀಮಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮೀರತ್ ನ ಕಲೀನಾ ಗ್ರಾಮದವರಾದ ಸೌರಭ್ ಓರ್ವ ರೈತನ ಪುತ್ರರಾಗಿದ್ದು ಕಳೆದ ತಿಂಗಳು ನಡೆದ ಏಷ್ಯಾಡ್ ಕ್ರೀಡಾಕುಟದಲ್ಲಿ ಸಹ ಶೂಟಿಂಗ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗಳಿಸಿಕೊಟ್ಟಿದ್ದರು.
ಇನ್ನು ಪುರುಷರ ಜ್ಯೂನಿಯರ್ ಟ್ರ್ಯಾಪ್ ವಿಭಾಗದಲ್ಲಿ ಭಾರತೀಯ ತಂಡ ಬೆಳ್ಳಿ ಪದಕ ಗಳಿಸಿ ಸಂಭ್ರಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Saurabh Chaudharyಸೌರಭ್ ಚೌಧರಿISSF World Championshipsshooting recordಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ಶೂಟಿಂಗ್ ದಾಖಲೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


