ಯೂತ್ ಒಲಂಪಿಕ್ಸ್ 2018: ಲಕ್ಷ ಸೇನ್ ಗೆ ಬ್ಯಾಡ್ಮಿಂಟನ್ ಬೆಳ್ಳಿ!
ಇಲ್ಲಿ ನ್ಡೆಯುತ್ತಿರುವ ಯೂತ್ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಯುವ ಬ್ಯಾಡ್ಮಿಂತನ್ ತಾರೆ ಲಕ್ಷ ಸೇನ್ ರಜತ ಪದಕ ಗಳಿಸಿದ್ದಾರೆ.

Published On :
ಬ್ಯೂನಸ್ ಐರಿಸ್: ಇಲ್ಲಿ ನ್ಡೆಯುತ್ತಿರುವ ಯೂತ್ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಯುವ ಬ್ಯಾಡ್ಮಿಂತನ್ ತಾರೆ ಲಕ್ಷ ಸೇನ್ ರಜತ ಪದಕ ಗಳಿಸಿದ್ದಾರೆ.
ಸೇನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಲಿ ಶಿಫೆಂಗ್ ವಿರುದ್ಧ 15-21, 19-21 ನೇರ ಸೆಟ್ ಗಳಿಂದ ಸೋತು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದಕ್ಕೆ ಮುನ್ನ ನಡೆದ ಸೆಮಿ ಫೈನಲ್ಸ್ ಹಣಾಹಣಿಯಲ್ಲಿ ಸೇನ್ ಜಪಾನ್ ನ ಕೊಡಾಯ್ ನಾರಾವೋಕಾ ವಿರುದ್ಧ ೧೪-೨೧, ೨೧-೧೫, ೨೪-೨೨ ಅಂತರದಲ್ಲಿ ಗೆದ್ದು ಪದಕದ ಆಸೆಯನ್ನು ಗಟ್ಟಿಗೊಳಿಸಿಕೊಂಡಿದ್ದರು.
ಪ್ರಸಕ್ತ ಸಾಲಿನ ಯೂತ್ ಒಲಂಪಿಕ್ಸ್ ನಲ್ಲಿ ಭಾರತದ ಪರ ಬೆಳ್ಳಿ ಪದಕ ಗೆದ್ದ ಪ್ರಥಮ ಆಟಗಾರ ಎನ್ನುವ ಕೀರ್ತಿಗೆ ಸೇನ್ ಭಾಜನರಾಗಿದ್ದಾರೆ.
ಇದಕ್ಕೆ ಮುನ್ನ ೨೦೧೦ರಲ್ಲಿ ಸಿಂಗಾಪುರದಲ್ಲಿ ನಡೆದಿದ್ದ ಪ್ರಥಮ ಯೂತ್ ಒಲಂಪಿಕ್ಸ್ ನಲ್ಲಿ ಭಾರತದ ಪ್ರಣಯ್ ಕುಮಾರ್ ರಜತ ಗೆದ್ದು ಸಾಧನೆ ಮೆರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Badmintonಬ್ಯಾಡ್ಮಿಂಟನ್silver medalಬೆಳ್ಳಿ ಪದಕYouth Olympics 2018Lakshya Senಯೂತ್ ಒಲಿಂಪಿಕ್ಸ್ 2018ಲಕ್ಷ ಸೇನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


