ಕ್ರೀಡೆ

ಏಷ್ಯನ್ ಪ್ಯಾರಾ ಗೇಮ್ಸ್ 2018: ಮಹಿಳಾ ಕ್ಲಬ್ ಥ್ರೋನಲ್ಲಿ ಭಾರತದ ಏಕ್ತಾಗೆ ಸ್ವರ್ಣ!

ಇಂಡೋನೇಷಿಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮಹಿಳಾ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಏಕ್ತಾ ಭ್ಯಾನ್ ಸ್ವರ್ಣ ಪದಕ ಗಳಿಸಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್ 2018: ಮಹಿಳಾ ಕ್ಲಬ್ ಥ್ರೋನಲ್ಲಿ ಭಾರತದ ಏಕ್ತಾಗೆ ಸ್ವರ್ಣ!
ಏಕ್ತಾ ಭ್ಯಾನ್
Published On :
ಜಕಾರ್ತಾ: ಇಂಡೋನೇಷಿಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮಹಿಳಾ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಏಕ್ತಾ ಭ್ಯಾನ್ ಸ್ವರ್ಣ ಪದಕ ಗಳಿಸಿದ್ದಾರೆ. ಇದು ಈ ಸಾಲಿನ ಕ್ರೀಡಾಕೂಟದಲ್ಲಿ ಭಾರತಕ್ಕೆ ದಕ್ಕುತ್ತಿರುವ ನಾಲ್ಕನೇ ಚಿನ್ನದ ಪದಕವಾಗಿದೆ.
ಭ್ಯಾನ್ ತನ್ನ ನಾಲ್ಕನೇ ಪ್ರಯತ್ನದಲ್ಲಿ 16.02 ಮೀ. ದೂರಕ್ಕೆ ಕ್ಲಬ್ ಎಸೆಯುವ ಮೂಲಕ ಚಿನ್ನದ ಸಾಧನೆ ಮಾಡಿದ್ದಾರೆ.
F32 / 51  ಶೈಲಿಯ ಕ್ರೀಡಾಪಟುವಾಗಿರುವ ಏಕ್ತಾ ಈ ವರ್ಷಾರಂಭದಲ್ಲಿ ನಡೆದಿದ್ದ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಸಹ ಚಿನ್ನದ ಪದಕ ಗಳಿಸಿದ್ದರು.
ಇನ್ನು ಮಂಗಳವಾರ ಭಾರತದ ಜಯಂತಿ ಬೆಹೆರಾ, ಆನಂದನ್ ಗುನಶೇಖರನ್ ಹಾಗೂ ಮೋನು ಘಂಗಾಸ್ ಸಹ ಕಂಚಿನ ಪದಕ ಗಳಿಸಿ ಮಿಂಚಿದ್ದಾರೆ.ಘಂಘಾಸ್ ತಾವು ಪುರುಷರ ಷಾಟ್ ಪುಟ್ ಎಸೆತದಲ್ಲಿ F11 ವಿಭಾಗದಲ್ಲಿ ನಡೆದ ಸ್ಪರ್ಧೆ ವೇಳೆ ತೃತೀಯ ಸ್ಥಾನ ಪಡೆದಿದ್ದರು. ಪುರುಷರ 200ಮೀ. T44 / 62/64 ವರ್ಗಗಳಲ್ಲಿ ಗುಣಶೇಖರನ್ ಹಾಗೂ ಮಹಿಳೆಯರ 200ಮೀ. T45 / 46/47 ವಿಬಾಗದಲ್ಲಿ ಬೆಹೆರಾ ಕಂಚು ಗಳಿಸಿದ್ದಾರೆ.
ಇದಕ್ಕೆ ಮುನ್ನ ಸೋಮವಾರದಂದು, ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರ್ತದ ಸಂದೀಪ್ ಚೌಧರಿ ವಿಶ್ವ ದಾಖಲೆಯ ಚಿನ್ನ ಜಯಿಸಿ ಭಾರತಕ್ಕೆ ಕೀರ್ತಿ ತಂದಿದ್ದರು. ಇದೀಗ ಏಕ್ತಾ ಅವರ ಚಿನ್ನದ ಪದಕ ಸೇರಿ ಭಾರತ ಇದುವರೆಗೆ ನಾಲ್ಕು ಚಿನ್ನದ ಪದಕಗಳೊಡನೆ ಒಟ್ಟಾರೆ ದಿನದಲ್ಲಿ 11 ಪದಕಗಳನ್ನು ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.