ಏಷ್ಯನ್ ಪ್ಯಾರಾ ಕ್ರೀಡಾಕೂಟ: ಜಾವಲಿನ್ ಥ್ರೋನಲ್ಲಿ ಸಂದೀಪ್ ಚೌಧರಿಗೆ ಚಿನ್ನ!
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತದ ಸಂದೀಪ್ ಚೌಧರಿ ಚಿನ್ನದ ಪದಕ ಗಳಿಸಿದ್ದಾರೆ.

Published On :
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತದ ಸಂದೀಪ್ ಚೌಧರಿ ಚಿನ್ನದ ಪದಕ ಗಳಿಸಿದ್ದಾರೆ. ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ ಇದು ಭಾರತ ಪರ ಬಂದಿರುವ ಪ್ರಥಮ ಚಿನ್ನದ ಪದಕವಾಗಿದ್ದು ಸಂದೀಪ್ ಜಾವಲಿನ್ ಥ್ರೋ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಪುರುಷರ F42-44 / 61-64 ವಿಬಾಗದಲ್ಲಿ ಸಂದೀಪ್ ಚೌಧರಿ 60.01 ಮೀಟರ್ ದೂರಕ್ಕೆ ಜಾವಲಿನ್ ಎಸೆಯುವ ಮೂಲಕ ಚಿನ್ನದ ಸಾಧನೆ ಮಾಡಿದ್ದಾರೆ. ಇಏ ವಿಭಾಗದಲ್ಲಿ ಶ್ರೀಲಂಕಾ ಆಟಗಾರ ಬೆಳ್ಳಿ ಪದಕ ಗಳಿಸಿದರೆ ಇರಾನ್ ನ ಸ್ಪರ್ಧಿ ಕಂಚಿನ ಪದಕ ಗಳಿಸಿದ್ದಾರೆ.
ನಿನ್ನೆ (ಭಾನುವಾರ) ಭಾರತ ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿತ್ತು.
49 ಕೆ.ಜಿ ಪುರುಷರ ಶವರ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ, ಫರ್ಮನ್ ಬಾಷಾ ಬೆಳ್ಳಿಯನ್ನು ಮತ್ತು ಪರಮೀತ್ ಕುಮಾರ್ ಕಂಚಿನ ಪದಕ ಗೆದ್ದುಕೊಂಡರು.
ಈಜು ವಿಭಾಗದಲ್ಲಿ ದೇವಂಶಿ ಸತಿಜವಾನ್, ಸುಯಾಶ್ ಜಾಧವ್ ಕಂಚಿನ ಪದಕವನ್ನು ಗೆದ್ದುಕೊಂಡರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
goldಚಿನ್ನJavelin ThrowerAsian Para GamesSandeep Chaudharyಏಷ್ಯನ್ ಪ್ಯಾರಾ ಕ್ರೀಡಾಕೂಟಸಂದೀಪ್ ಚೌಧರಿಜಾವೆಲಿನ್ ಎಸೆತಗಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


