ಕ್ರೀಡೆ

ಹಾಕಿ ವಿಶ್ವಕಪ್: ದ. ಆಫ್ರಿಕಾ ವಿರುದ್ಧ ಭಾರತಕ್ಕೆ 5-0 ಅಂತರದ ಭರ್ಜರಿ ಜಯ!

2018ರ ಪ್ರತಿಷ್ಠಿತ ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿ ಪ್ರಾರಂಭವಾಗಿದ್ದು ಆತಿಥೇಯ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು 5-0 ಗೋಲುಗಳಿಂದ ಮಣಿಸಿ ಶುಭಾರಂಭ ಮಾಡಿದೆ.

ಹಾಕಿ ವಿಶ್ವಕಪ್: ದ. ಆಫ್ರಿಕಾ ವಿರುದ್ಧ ಭಾರತಕ್ಕೆ 5-0 ಅಂತರದ ಭರ್ಜರಿ ಜಯ!
ಹಾಕಿ ವಿಶ್ವಕಪ್: ದ. ಆಫ್ರಿಕಾ ವಿರುದ್ಧ ಭಾರತಕ್ಕೆ 5-0 ಅಂತರದ ಭರ್ಜರಿ ಜಯ!
Published On :
ಭುವನೇಶ್ವರ್: 2018ರ ಪ್ರತಿಷ್ಠಿತ ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿ ಪ್ರಾರಂಭವಾಗಿದ್ದು  ಆತಿಥೇಯ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು  5-0  ಗೋಲುಗಳಿಂದ ಮಣಿಸಿ ಶುಭಾರಂಭ ಮಾಡಿದೆ.
ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಿಮ್ರನ್ ಜೀತ್ ಸಿಂಗ್ ಪಂದ್ಯ ಪುರುಶೋತ್ತಮ ಪ್ರಶಸ್ತಿ ಗಳಿಸಿಕೊಂಂಡಿದ್ದಾರೆ.
ಭಾರತದ ಪರ ಮನ್‌ದೀಪ್‌ ಸಿಂಗ್ (10ನೇ  ನಿಮಿಷ), ಆಕಾಶ್ ದೀಪ್ ಸಿಂಗ್ (12ನೇ ನಿಮಿಷ), ಸಿಮ್ರನ್‌ಜೀತ್‌ (43, 46ನೇ ನಿಮಿಷ) ಹಾಗೂ ಲಲಿತ್ ಉಪಾಧ್ಯಾಯ (45ನೇ ನಿಮಿಷ) ದಲ್ಲಿ ಗೋಲು ಗಳಿಸಿದ್ದರು.
ಇಂದು (ನ.28 ) ಒಡಿಶಾದ ಭುವನೇಶ್ವರದಲ್ಲಿ ಪ್ರಾರಂಭವಾಗಿರುವ ಹಾಕಿ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಗಳಿಸಿದ ಭಾರತ ಬರೋಬ್ಬರಿ 43  ವರ್ಷಗಳ ಹಿಂದೆ ಎದುರಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಬೆಲ್ಜಿಯಂ ಗೆ ಜಯ
ಹಾಕಿ ವಿಶ್ವಕಪ್ ಸರಣಿಯ ಪ್ರಾರಂಭಿಕ ಪಂದ್ಯ ಕೆನಡಾ ಹಾಗೂ ಬೆಲ್ಜಿಯಂ ವಿರುದ್ಧ ನಡೆದಿದ್ದು ಈ ಪಂದ್ಯದಲ್ಲಿ ಬೆಲ್ಜಿಯಂ 2-1 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.