ಮೆಕ್ಸಿಕೋ ಐಎಸ್ ಎಸ್ ಎಫ್ ವಿಶ್ವಕಪ್ : ಶೂಟಿಂಗ್ ನಲ್ಲಿ ಭಾರತಕ್ಕೆ ಒಂದು ಚಿನ್ನ, ಎರಡು ಕಂಚು
ಐಎಸ್ ಎಸ್ ಎಫ್ ವಿಶ್ವಕಪ್ ನ ಅಂತಿಮ ಪಂದ್ಯದಲ್ಲಿ ಶೂಟರ್ ಷಹಜರ್ ರಿಜ್ವಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಜೀತು ರಾಯ್ ಹಾಗೂ ಮೆಹುಲಿ ಘೋಷ್ ತಲಾ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ

ಮೆಕ್ಸಿಕೊ :ಇಲ್ಲಿ ನಡೆದ ಐಎಸ್ ಎಸ್ ಎಫ್ ವಿಶ್ವಕಪ್ ನ ಅಂತಿಮ ಪಂದ್ಯದಲ್ಲಿ ಶೂಟರ್ ಷಹಜರ್ ರಿಜ್ವಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಜೀತು ರಾಯ್ ಹಾಗೂ ಮೆಹುಲಿ ಘೋಷ್ ತಲಾ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಮೀರತ್ ಮೂಲದ ರಿಜ್ವಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಜರ್ಮನಿಯ ಕ್ರಿಸ್ಟಿಯಾನ್ ರಿಟ್ಜ್ ವಿರುದ್ಧ 242.3 ಅಂಕ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೆಹುಲಿ, 228.4 ಅಂಕ ಪಡೆದರೆ, ಜೀತುರಾಯ್ 219 ಅಂಕ ಪಡೆದು ಕಂಚಿನ ಪದಕ ಪಡೆದುಕೊಂಡರು.ಮೊದಲ ವಿಶ್ವಕಪ್ ನ ಪಂದ್ಯದಲ್ಲಿ ಭಾರತದಿಂದ ಮೂವರು ಶೂಟರ್ ಗಳು ಸ್ಪರ್ಧಿಸಿದ್ದರು.
ಅಂಜುಮ್ ಮೊದ್ಗಿಲ್ 208. 6 ಅಂಕ ಕಲೆಹಾಕಿದರೆ, ಓಂ ಪ್ರಕಾಶ್ ಮಿಥರ್ವಾಲ್ , 198.4 ಅಂಕ ಗಿಟ್ಟಿಸಿ ನಾಲ್ಕನೇ ಸ್ಥಾನ ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


