ಮಹಿಳಾ ಹಾಕಿ ವಿಶ್ವಕಪ್ 2018: ಉದ್ಘಾಟನಾ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ
ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇತ್ತ ಲಂಡನ್ ನಲ್ಲಿ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Published On :
ಲಂಡನ್: ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇತ್ತ ಲಂಡನ್ ನಲ್ಲಿ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾರತ ತಂಡ ಗ್ರೂಪ್ ಬಿಯಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಜುಲೈ 26ರಂದು ಭಾರತದ ಮಹಿಳೆಯರ ತಂಡ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಆ ಬಳಿಕ ಜುಲೈ 29ರಂದು ಅಮೆರಿಕ ತಂಡದ ವಿರುದ್ಧ ಭಾರತ ಸೆಣಸಲಿದೆ. ಇನ್ನು ಪ್ರತಿಷ್ಠಿತ ಟೂರ್ನಿಗೆ ನಾಯಕಿ ರಾಣಿ ನೇತೃತ್ವದ ಭಾರತ ತಂಡ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಈ ಬಗ್ಗೆ ಮಾತನಾಡಿರುವ ನಾಯಕಿ ರಾಣಿ, ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಆದರೆ ಅತಿಥೇಯರಾಗಿರುವ ಇಂಗ್ಲೆಂಡ್ ತಂಡದ ಮೇಲೆ ಖಂಡಿತಾ ಒತ್ತಡ ಇರುತ್ತದೆ. ಈ ಹಿಂದೆ ಕಾಮನ್ ವೆಲ್ಚ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ತಂಡವನ್ನು ನಾವು ಮಣಿಸಿದ್ದೇವೆ. ಹೀಗಾಗಿ ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸವಿದೆ. ತಂಡದ ಫಾರ್ವರ್ಡ್ ಪ್ರಸ್ತುತ ಅತ್ಯುತ್ತಮವಾಗಿದ್ದು, ನಾವು ಯಾವುದೇ ನಿರ್ದಿಷ್ಟ ಆಟಗಾರ್ತಿಯರ ಮೇಲೆ ಅವಲಂಬಿತರಾಗಿಲ್ಲ. ತಂಡದಲ್ಲಿ ಯುವ ಆಟಗಾರ್ತಿಯರಿದ್ದು, ಖಂಡಿತಾ ಉತ್ತಮ ಪ್ರದರ್ಶನ ನೀಡುತ್ತೇವೆ. ತಂಡದ ಸ್ಟಾರ್ ಆಟಗಾರ್ತಿ ಗುರ್ಜಿತ್ ಕೌರ್ ಸೇರ್ಪಡೆಯಿಂದಾಗಿ ತಂಡದಲ್ಲಿ ಹೊಸ ಹುರುಪು ಸೃಷ್ಟಿಯಾಗಿದೆ. ಅಂತೆಯೇ 200ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ವಂದನಾ ಕಟಾರಿಯಾ ಅವರ ಅನುಭವ ನೆರವಾಗಲಿದೆ ಎಂದು ರಾಣಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆLondonಲಂಡನ್indiaಭಾರತhockeyಹಾಕಿಇಂಗ್ಲೆಂಡ್EnglandWomens Hockey World Cup 2018ಮಹಿಳಾ ಹಾಕಿ ವಿಶ್ವಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


