ಚಿನ್ನ ಗೆದ್ದ ಹಿಮಾ ದಾಸ್ ಯಾವ ಜಾತಿ? ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್!
ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ಹಿಮಾ ದಾಸ್ ಯಾವ ಜಾತಿ ಎಂಬ...

Published On :
ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ಹಿಮಾ ದಾಸ್ ಯಾವ ಜಾತಿ ಎಂಬ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗುತ್ತಿದೆ.
ಹಿಮಾ ದಾಸ್ ಭಾರತೀಯಳು ಎಂಬ ಅಭಿಮಾನ ಬದಲಿಗೆ ಅವಳು ಯಾವ ಜಾತಿ ಎಂಬುದರ ಬಗ್ಗೆ ಜನರು ಸರ್ಚ್ ಮಾಡುತ್ತಿದ್ದಾರೆ.
ಹಿಮಾ ದಾಸ್ ಬಗ್ಗೆ ಹುಡುಕಲು ಹೊರಟರೆ ನಮ್ಮ ಮುಂದೆ ಗೂಗಲ್ ಮೊದಲು ತೋರಿಸುವುದು ಹಿಮಾ ದಾಸ್ ಜಾತಿ. ಅದರಲ್ಲೂ ಕೇರಳ, ಕರ್ನಾಟಕ ಹರಿಯಾಣ, ಅಸ್ಸಾಂ ಹಾಗೂ ಬೆಂಗಾಲ್ ನಲ್ಲಿ ಅತೀ ಹೆಚ್ಚು ಜನ ಹಿಮಾ ದಾಸ್ ಳ ಜಾತಿಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
ಈ ಹಿಂದೆ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ಹಾಗೂ ಪಿವಿ ಸಿಂಧು ಅವರ ಜಾತಿಯನ್ನು ಭಾರತೀಯರು ಹುಡುಕಿದ್ದರು. ಇದಗೀ ಹಿಮಾ ದಾಸ್ ಸರದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆindiaಭಾರತಜಾತಿgoldಚಿನ್ನGoogle Searchಗೂಗಲ್ ಸರ್ಚ್castWorld Junior AthleticsHima Dasವಿಶ್ವ ಜೂನಿಯರ್ ಅಥ್ಲೆಟಿಕ್ಸ್ಹಿಮಾ ದಾಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


