ಆಸ್ಟ್ರೇಲಿಯಾ ಓಪನ್ ಫೈನಲ್: ರೋಹನ್ ಬೋಪಣ್ಣ, ಟಿಮಿಯಾ ಬಬೋಸ್ ಜೋಡಿಗೆ ಸೋಲು
ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಹಗೇರಿಯಾದ ಟಿಮಿಯಾ ಬಬೂಸ್ ಜೋಡಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸೋಲು ಅನುಭವಿಸಿದೆ.

Published On :
ಸಿಡ್ನಿ: ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಹಗೇರಿಯಾದ ಟಿಮಿಯಾ ಬಬೂಸ್ ಜೋಡಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸೋಲು ಅನುಭವಿಸಿದೆ.
ಭಾನುವಾರ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಗಾಬ್ರಿಯೆಲಾ ಡಬ್ರೊಸ್ಕಿ ಮತ್ತು ಮೇಟ್ ಪವಿಕ್ ವಿರುದ್ಧ ರೋಹನ್ ಬೋಪಣ್ಣ ಮತ್ತು ಟಿಮಿಯಾ ಬಬೂಸ್ ಜೋಡಿ 6-2, 4-6, [9-11] ಅಂತರದಲ್ಲಿ ಸೋಲು ಕಂಡಿದೆ. ಆರಂಭದಿಂದಲೂ ರೋಚಕವಾಗಿ ಸಾಗಿದ್ದ ಪಂದ್ಯದ ಅಂತಿಮ ಭಾಗದಲ್ಲಿ ಮೇಲುಗೈ ಸಾಧಿಸಿದ ಗಾಬ್ರಿಯೆಲಾ ಡಬ್ರೊಸ್ಕಿ ಮತ್ತು ಮೇಟ್ ಪವಿಕ್ ಜೋಡಿ ಗೆಲುವು ಕಾಣುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿತು.
ಇನ್ನು ಕಳೆದ ಶುಕ್ರವಾರ ನಡೆದ ಮಿಶ್ರ ಡಬಲ್ಸ್ ಸೆಮಿಫೈನಲ್ ಮುಖಾಮುಖಿಯಲ್ಲಿ ಟಿಮಿಯಾ ಬಬೂಸ್ ಜತೆ ಕಣಕ್ಕಿಳಿದ ಬೋಪಣ್ಣ, ಎದುರಾಳಿ ಸ್ಪೇನ್-ಬ್ರೆಜಿಲ್‌ನ ಮಾರ್ಸೆಲೊ ಡೆಮೊಲಿನರ್ ಹಾಗೂ ಮಾರ್ಟಿನೆಜ್ ಸ್ಯಾನ್‌ಚೆಜ್ ವಿರುದ್ಧ 7-5, 5-7, 10-6ರ ಕಠಿಣ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಟೂರ್ನಿಯುದ್ಧಕ್ಕೂ ಅಮೋಘ ನಿರ್ವಹಣೆ ನೀಡಿರುವ ಐದನೇ ಶ್ರೇಯಾಂಕಿತರಾಗಿರುವ ಬೋಪಣ್ಣ ಜೋಡಿ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಜೋಡಿಯಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆBadmintonಬ್ಯಾಡ್ಮಿಂಟನ್Sydneyಸಿಡ್ನಿRohan Bopannaರೋಹನ್ ಬೋಪಣ್ಣAustralian Openಆಸ್ಟ್ರೇಲಿಯಾ ಓಪನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


