ಕೆಬಿಸಿ ಬಹುಮಾನದ ಮೊತ್ತವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿವಿ ಸಿಂಧು
ಒಲಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಭಾರತ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ರಿಯಾಲಿಟಿ ಶೋ ಒಂದರಲ್ಲಿ ತಾವು ಗೆದ್ದ 25 ಲಕ್ಷ ರೂ. ಹಣವನ್ನು ಕಾನ್ಸರ್ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ.

Published On :
ಹೈದರಾಬಾದ್: ಒಲಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಭಾರತ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ರಿಯಾಲಿಟಿ ಶೋ ಒಂದರಲ್ಲಿ ತಾವು ಗೆದ್ದ 25 ಲಕ್ಷ ರೂ. ಹಣವನ್ನು ಕಾನ್ಸರ್ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ.
ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆ೩ಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು ಒಟ್ಟು 25 ಲಕ್ಷ ರೂ. ಬಹುಮಾನ ಗಳಿಸಿದ್ದರು. ಇದೀಗ ಅದ್ಷ್ಟೂ ಹಣವನ್ನು ಇಂಡೋ ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ತೆಲುಗಿನ ಖ್ಯಾತ ನಟ ಬಾಲಯ್ಯ ನಡೆಸುವ ಇಂಡೊ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಸಿಂಧು ತಮ್ಮ ಬಹುಮಾನದ ಮೊತ್ತವನ್ನು ನೀಡಿದ್ದು ಬಾಲಯ್ಯಗೆ ರೂ.25 ಲಕ್ಷದ ಚೆಕ್ ನೀಡಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿಯಿಂದ ನೆರವನ್ನು ಪಡೆದ ಬಾಲಯ್ಯ ಸಿಂಧು ಅವರ ಕೆಲಸವನ್ನು ಪ್ರಶಂಸಿಸಿದ್ದು ಅವರ ಕೆಲಸದಿಂದ ಇನ್ನಷ್ಟು ಜನ ಸ್ಪೂರ್ತಿ ಪಡೆವಂತಾಗಲಿ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Amitabh Bachchanಅಮಿತಾಬ್ ಬಚ್ಚನ್Cancer Hospitalಕ್ಯಾನ್ಸರ್ ಆಸ್ಪತ್ರೆP V SindhuBalakrishnaKBCಪಿ ವಿ ಸಿಂಧುಕೆಬಿಸಿಬಾಲಕೃಷ್ಣ(ಬಾಲಯ್ಯ)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


