BWF ವರ್ಲ್ಡ್ ಟೂರ್ ಫೈನಲ್ಸ್: ರಾಚ್ಟಾನೋಕ್ ಇಂಟನಾನ್ ಮಣಿಸಿದ ಪಿವಿ ಸಿಂಧು ಫೈನಲ್ ಗೆ ಲಗ್ಗೆ
ಚೀನಾದ ಗುವಾಂಗ್ ಜೌನಲ್ಲಿ ನಡೆಯುತ್ತಿರುವ BWF ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧು ಅವರು ಇಂಡೋನೇಷ್ಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್ ಗೇರಿದ್ದಾರೆ.

Published On :
ಗುವಾಂಗ್ ಜೌ: ಚೀನಾದ ಗುವಾಂಗ್ ಜೌನಲ್ಲಿ ನಡೆಯುತ್ತಿರುವ BWF ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧು ಅವರು ಇಂಡೋನೇಷ್ಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್ ಗೇರಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಇಂಡೋನೇಷ್ಯಾ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ರನ್ನು 21-16, 25-23 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಕೇವಲ 35 ನಿಮಿಷಗಳಲ್ಲೇ ಮುಕ್ತಾಯವಾದ ಈ ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪಿವಿ ಸಿಂಧು ಮೊದಲೆ ಸೆಟ್ ಅನ್ನು 21-16 ಭಾರಿ ಅಂತರದಲ್ಲಿ ಗೆದ್ದು ಬೀಗಿದರು. ಆದರೆ 2ನೇ ಸೆಟ್ ನಲ್ಲಿ ಸಿಂಧು ಇಂಡೋನೇಷ್ಯಾ ಆಟಗಾರ್ತಿಯಿಂದ ತೀವ್ರ ಪೈಪೋಟಿ ಎದುರಿಸಿದರೂ ಅಂತಿಮವಾಗಿ 25-23 ನೇರ ಸೆಟ್ ಗಳ ಅಂತರದ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಅಂತೆಯೇ ಈ ಗೆಲುವಿನ ಮೂಲಕ ತಮ್ಮ ಗ್ರೂಪ್ ನಲ್ಲಿ ಪಿವಿ ಸಿಂಧು ಅಗ್ರ ಸ್ಥಾನಕ್ಕೇರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆBadmintonಬ್ಯಾಡ್ಮಿಂಟನ್ChinaಚೀನಾPV Sindhuಪಿವಿ ಸಿಂಧುGhuabzhouBWF World Tour Finals 2018ಗುವಾಂಗ್ ಜೌBWF ವರ್ಲ್ಡ್ ಟೂರ್ ಫೈನಲ್ಸ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


