ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಆಟಗಾರ್ತಿಗೆ ದಂಡ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಮೈದಾನದಲ್ಲೇ ಟೀ ಶರ್ಟ್ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಫ್ರಾನ್ಸ್ ನ ಟೆನ್ನಿಸ್ ಆಟಗಾರ್ತಿಗೆ ಅಂಪೈರ್ ದಂಡ ವಿಧಿಸಿದ್ದಾರೆ.

Published On :
ನ್ಯೂಯಾರ್ಕ್: ಮೈದಾನದಲ್ಲೇ ಟೀ ಶರ್ಟ್ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಫ್ರಾನ್ಸ್ ನ ಟೆನ್ನಿಸ್ ಆಟಗಾರ್ತಿಗೆ ಅಂಪೈರ್ ದಂಡ ವಿಧಿಸಿದ್ದಾರೆ.
ದಂಡದ ಮೊತ್ತ ಬಹಿರಂಗವಾಗಿಲ್ಲವಾದರೂ ಅಂಪೈರ್ ತೀರ್ಮಾನ ಮಾತ್ರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಮೆರಿಕನ್ ಓಪನ್ ಟೂರ್ನಿ ನಿಮಿತ್ತ ನಡೆಯುತ್ತಿದ್ದ ಪಂದ್ಯದಲ್ಲಿ ಫ್ರಾನ್ಸ್ ನ ಅಲೈಜ್ ಕಾರ್ನೆಟ್ ಅಂಗಳದಲ್ಲೇ ತಮ್ಮ ಟೀ ಶರ್ಟ್ ಬದಲಿಸಿಕೊಳ್ಳುವ ಮೂಲಕ ವಿವಾದಕ್ಕೆ ಆಸ್ಪದ ನೀಡಿದ್ದರು. ಅಲೈಜ್ ಅಂಗಳಕ್ಕೆ ಬರುವಾಗ ಟೀ ಶರ್ಟ್ ಉಲ್ಟಾ ಹಾಕಿಕೊಂಡು ಬಂದಿದ್ದರು. ಇದು ಗೊತ್ತಾಗಿ ಆಕೆ ಮೈದಾನದಲ್ಲೇ ಟೀ ಶರ್ಟ್ ಅನ್ನು ಬದಲಿಸಿಕೊಂಡಿದ್ದಾರೆ.
ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಕೂಗಳತೆ ದೂರದಲ್ಲಿದ್ದ ಡ್ರೆಸಿಂಗ್ ರೂಂಗೆ ತೆರಳದೇ ಮೈದಾನದಲ್ಲೇ ಆಟಗಾರ್ತಿ ಟೀ ಶರ್ಟ್ ಬದಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಸರ್ಬಿಯಾದ ಆಟಗಾರ ನೊವಾಕ್ ಜಾಕೋವಿಚ್ ಅವರು ತಮ್ಮ ಟೀ ಶರ್ಟ್ ಬಿಚ್ಚಿ ಬಿಸಾಡಿ ವಿಶ್ರಾಂತಿ ಪಡೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿವೆ. ಪುರುಷರಿಗಿಲ್ಲದ ನೀತಿ ಮಹಿಳೆಯರಿಗೇಕೆ ಎಂಬ ವಾದ ಜೋರಾಗಿ ಕೇಳಿಬರುತ್ತಿದೆ.
ವಿವಾದದ ಬಳಿಕ ಕ್ಷಮೆ ಕೋರಿದ ಆಯೋಜಕರು
ಇನ್ನು ತಮ್ಮ ಟೀ ಶರ್ಟ್ ಬದಲಾವಣೆ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ ಇತ್ತ ಅಮೆರಿಕ ಓಪನ್ ಟೂರ್ನಿ ಆಯೋಜಕರು ಕ್ಷಮೆ ಕೋರಿದ್ದಾರೆ. ಕಾರ್ನೆಟ್ ವರ್ತನೆ ನಿಜಕ್ಕೂ ಆತಂಕಕಾರಿ. ಮುಂದೆ ಇಂತಹ ಘಟನೆಗಳಾಗುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


