ಏಷ್ಯನ್ ಗೇಮ್ಸ್ 2018: ಮಲೇಷ್ಯಾ ವಿರುದ್ಧ ಫೈನಲ್ ಮುಗ್ಗರಿಸಿದ ಭಾರತ ಹಾಕಿ ತಂಡ
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಭಾರತ ಹಾಕಿ ತಂಡದ ಪೆನಾಲ್ಟಿ ಶೂಟೌಟ್ನಲ್ಲಿನ ಎಡವಟ್ಟಿನಿಂದ ಮಲೇಷ್ಯಾ ಎದುರಿನ ಹಾಕಿ ಸೆಮಿಫೈನಲ್ನಲ್ಲಿ ಸೋಲಿಗೆ ಶರಣಾಗಿದೆ.

Published On :
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಭಾರತ ಹಾಕಿ ತಂಡದ ಪೆನಾಲ್ಟಿ ಶೂಟೌಟ್ನಲ್ಲಿನ ಎಡವಟ್ಟಿನಿಂದ ಮಲೇಷ್ಯಾ ಎದುರಿನ ಹಾಕಿ ಸೆಮಿಫೈನಲ್ನಲ್ಲಿ ಸೋಲಿಗೆ ಶರಣಾಗಿದೆ.
ಇಂಡೋನೇಷ್ಯಾದ ಪಲೆಂಬಾಂಗ್ ನಲ್ಲಿ ಇಂದು ನಡೆದ ಪುರುಷರ ಹಾಕಿಯ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ 6-7 ಅಂತರದ ಸೋಲು ಕಂಡಿದೆ. ಭಾರತ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಮಾಡಿಕೊಂಡ ಸ್ವಯಂಕೃತ ಅಪರಾಧದಿಂದಾಗಿ ಫೈನಲ್ ಗೇರುವ ಅಪೂರ್ವ ಅವಕಾಶವನ್ನು ಕೈ ಚೆಲ್ಲಿದೆ.
ಪಂದ್ಯದ ಪೂರ್ಣಾವಧಿ ಹೊತ್ತಿಗೆ ಎರಡು ತಂಡಗಳು ಅತ್ಯುತ್ತಮ ಆಟವಾಡುವ ಮೂಲಕ 2-2 ಗೋಲುಗಳಿಂದ ಸಮಬಲ ಸಾಧಿಸಿದವು. ಆದರೆ ಪೆನಾಲ್ಟಿಯಲ್ಲಿ ಭಾರತ ತಂಡ ಒಂದು ಗೋಲಿನ ಅಂತರದಲ್ಲಿ ಪರಾಭವಗೊಂಡಿತು. ವಿಶ್ವಾಸದಿಂದಲೇ ಮೈದಾನಕ್ಕೆ ಆಗಮಿಸಿದ ಭಾರತ ಆರಂಭದಿಂದಲೂ ಅತ್ಯುತ್ತಮ ಆಟವಾಡುವಲ್ಲಿ ಯಶಸ್ವಿಯಾಯಿತು. ಪಂದ್ಯ ಆರಂಭದ 33 ನೇ ನಿಮಿಷದಲ್ಲೇ ಭಾರತದ ಹರ್ಮನ್ಪ್ರೀತ್ ಅವರು ಮೊದಲ ಗೋಲು ಬಾರಿಸಿದರು. 40 ನೇ ನಿಮಿಷದಲ್ಲಿ ವರುಣ್ ಅವರು ತಂಡಕ್ಕೆ ಎರಡನೇ ಗೋಲಿನ ಕಾಣಿಕೆ ನೀಡಿ ಭಾರತಕ್ಕೆ ಉತ್ತಮ ಮುನ್ನಡೆ ನೀಡಿದರು.
ಮಲೇಷ್ಯಾದ ಫೈಜಾಲ್ ಅವರು 40ನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಗೋಲನ್ನು ನೀಡಿದರು. ಪಂದ್ಯ ಕೊನೆಯ 59ನೇ ನಿಮಿಷದಲ್ಲಿ ರಹೀಮ್ ಎಬಿಡಿ ಮತ್ತೊಂದು ಗೋಲು ಹೊಡೆದರು. ಈ ಮೂಲಕ ಪಂದ್ಯದ ಪೂರ್ಣಾವಧಿಯಲ್ಲಿ ಎರಡು ತಂಡಗಳು 2-2 ಗೋಲುಗಳ ಮೂಲಕ ಸಮಬಲ ಸಾಧಿಸಿದವು.
ನಂತರ ಫಲಿತಾಂಶಕ್ಕಾಗಿ ಎರಡು ತಂಡಗಳಿಗೆ ಪೆನಾಲ್ಟಿ ಶೂಟೌಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದವು. ಮಲೇಷ್ಯಾಗೆ ಸಿಕ್ಕ ಮೊದಲ ಶೂಟೌಟ್ನಲ್ಲಿ ಪ್ರಿರ್ಹಾನ್ ಮೊದಲ ಗೋಲು ದಾಖಲಿಸಿದರು. ಭಾರತದ ಆಕಾಶ್ ದೀಪ್ ಸಿಂಗ್ ಗೋಲು ದಾಖಲಿಸಿದರು. ಈ ಮೂಲಕ 1-1 ಸಮಬಲವಾದವು. ಮಲೇಷ್ಯಾದ ಹಶರಿ , ಪಿತ್ರಿ ಸಾರಿ, ಹಸನ್, ಫೈಜಲ್ ಅವರು ತಲಾ ಒಂದೊಂದು ಗೋಲನ್ನು ಬಾರಿಸಿ ತಂಡಕ್ಕೆ ಏಳು ಗೋಲುಗಳನ್ನು ನೀಡಿದರು. ಭಾರತದ ಹರ್ಮನ್ಪ್ರೀತ್ ಎರಡು, ಆಕಾಶ್ ದೀಪ್, ಮನ್ಪ್ರೀತ್, ದೀಲ್ಪ್ರೀತ್ ಸಿಂಗ್, ಪೆನಾಲ್ಟಿ ಶೂಟೌಟ್ಗಳಲ್ಲಿ ಭಾರತಕ್ಕೆ ಗೋಲು ಯಶಸ್ವಿಯಾದರು.
ಕೊನೆಯ ಶೂಟೌಟ್ ಅನ್ನು ಎಸ್.ವಿ ಸುನೀಲ್ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು. ಆ ಮೂಲಕ ಭಾರತ ತಂಡ ಸೋಲಿಗೆ ಶರಣಾಯಿತು. ಭಾರತಕ್ಕೆ ಸಿಕ್ಕ 10 ಪೆನಾಲ್ಟಿಯಲ್ಲಿ ಆರು ಗೋಲುಗಳನ್ನು ತಮ್ಮದಾಗಿಸಿಕೊಂಡರೆ, ಮಲೇಷ್ಯಾ ಏಳು ಗೋಲುಗಳನ್ನು ಬಾರಿಸಿ ಫೈನಲ್ಗೆ ಅರ್ಹತೆ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


