ಕ್ರೀಡೆ

ಏಷ್ಯನ್‌ ಗೇಮ್ಸ್‌ 2018: ಪುರುಷರ ರಿಲೆ ತಂಡಕ್ಕೆ ಬೆಳ್ಳಿ ಪದಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತದ ಪುರುಷರ ರಿಲೆ ತಂಡ ಬೆಳ್ಳಿ ಪದಕ ಪಡೆದಿದೆ.

ಏಷ್ಯನ್‌ ಗೇಮ್ಸ್‌ 2018: ಪುರುಷರ ರಿಲೆ ತಂಡಕ್ಕೆ ಬೆಳ್ಳಿ ಪದಕ
ಬೆಳ್ಳಿ ಗೆದ್ದ ಪುರುಷರ ರಿಲೇ ತಂಡ
Published On :
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತದ ಪುರುಷರ ರಿಲೆ ತಂಡ ಬೆಳ್ಳಿ ಪದಕ ಪಡೆದಿದೆ.
ಪುರುಷರ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಎರಡನೇ ಸ್ಥಾನ ಪಡೆದಿದ್ದು, ಈ ಮೂಲಕ ಬೆಳ್ಳಿ ಪದಕಕ್ಕೆ ಭಾಜನವಾಗಿದೆ. ಭಾರತದ ರಿಲೇ ತಂಡದ ಓಟಗಾರರಾದ ಮಹಮದ್‌ ಕುನ್ಹು, ಧರು ಅಯ್ಯಸ್ವಾಮಿ, ಮಹಮದ್‌ ಅನಾಸ್‌ ಮತ್ತು ಅರೋಕಿ ರಾಜೀವ್ ಅವರು 4×400 ಮೀಟರ್‌ ಪುರುಷರ ರಿಲೆಯಲ್ಲಿ 3.06.48 ಸೆಕೆಂಡ್‌ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. 
ಈ ಮೊದಲು ಮಹಿಳೆಯರ ರಿಲೆ ತಂಡವೂ ಸಹ ಚಿನ್ನದ ಪದಕವನ್ನು ಗೆದ್ದಿದೆ. ಈ ಮೂಲಕ ಭಾರತ ಏಷ್ಯನ್‌ ಗೇಮ್ಸ್‌ನಲ್ಲಿ 13 ಸ್ವರ್ಣ, 21 ಬೆಳ್ಳಿ ಮತ್ತು 25 ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟು 59 ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಇನ್ನು ಪುರುಷರ ಸಾಧನೆಗೆ ಮೆಚ್ಚುಗೆ ಸೂಟಚಿಸಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಅದ್ಬುತ ಪ್ರದರ್ಶನ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.