ವಿದ್ಯುಕ್ತವಾಗಿ ಆರಂಭಗೊಂಡ ಏಷ್ಯನ್ ಗೇಮ್ಸ್ 2018
ಇಂಡೊನೇಷಿಯಾ ರಾಜಧಾನಿ ಜಕಾರ್ತಾದಲ್ಲಿ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ವಿದ್ಯುಕ್ತ ...

ಜಕರ್ತಾ(ಆ.18): ಇಂಡೊನೇಷಿಯಾ ರಾಜಧಾನಿ ಜಕಾರ್ತಾದಲ್ಲಿ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇಂಡೊನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಜಕಾರ್ತಾದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಕಾರ್ತಾ ಮತ್ತು ಸುಮಾತ್ರದ ಪಾಲೆಂಬಾಗ್‌ನಲ್ಲಿ ಎರಡು ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟದ ಆರಂಭದಲ್ಲಿ ಕ್ರೀಡಾಪಟುಗಳು ಪಥಸಂಚಲನ ಗಮನೆಸೆಳೆಯಿತು. ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಚೋಪ್ರ ಧ್ವಜಾಧಾರಿಯಾಗಿ ಪಥಸಂಚಲನದಲ್ಲಿ ಭಾರತ ಕ್ರೀಡಾಪಟುಗಳ ತಂಡವನ್ನ ಮುನ್ನಡೆಸಿದರು.804 ಸದಸ್ಯರ ಭಾರತೀಯ ತಂಡದಲ್ಲಿ 572 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. 45 ದೇಶಗಳಿಂದ ಸುಮಾರು 10 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು 58 ಪಂದ್ಯಗಳು ನಡೆಯಲಿವೆ.
ಇಂಡೊನೇಷಿಯಾ ಬ್ಯಾಡ್ಮಿಂಟನ್ ಆಟಗಾರ ಲುಸಿಯಾ ಫ್ರಾನ್ಸಿಸ್ಕಾ ಸುಸಿ ಸುಸಂತಿ ಕ್ರೀಡೆಗೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯಗಳ ಮಹಾಪೂರ ಗಣ್ಯರಿಂದ ಹರಿದು ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಶುಭ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


