ಬಿಎಂಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್: ಭಾರತದ ಸೈನಾ ನೆಹ್ವಾಲ್, ರಾಂಕಿರೆಡ್ಡಿಗೆ ಸೋಲು!
ನಾಂಜಿಂಗ್ ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಭಾರತದ ಶಟ್ಲರ್ ಸೈನಾ ನೆಹ್ವಾಲ್ ಹಾಗೂ ರಾಂಕಿರೆಡ್ಡಿಗೆ ಸೋಲು ಕಂಡಿದ್ದಾರೆ.

Published On :
ನವದೆಹಲಿ: ನಾಂಜಿಂಗ್ ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಭಾರತದ ಶಟ್ಲರ್ ಸೈನಾ ನೆಹ್ವಾಲ್ ಹಾಗೂ ರಾಂಕಿರೆಡ್ಡಿಗೆ ಸೋಲು ಕಂಡಿದ್ದಾರೆ.
ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಸ್ಪೇನ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ 21-6, 21-11 ಅಂತರದ ನೇರ ಸೆಟ್ ಗಳಿಂದ ಪರಾಭವಗೊಂಡರು. ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನಿಡಿದ ಮರಿನ್ ಆರಂಭದಲ್ಲಿ 11-2 ಅಂತರ ಕಾಯ್ದುಕೊಳ್ಳುವ ಮೂಲಕ ಸೈನಾ ವಿರುದ್ಧ ಪ್ರಬಲ ಹಿಡಿತ ಸಾಧಿಸಿದರು. ಈ ಮೂಲಕ 21-6 ಅಂತರದಿಂದ ಮೊದಲ ಸೆಟ್ ಸೈನಾ ಕೈ ತಪ್ಪಿತು.
ಮೊದಲ ಸೆಟ್ ನ ಹಿನ್ನಡೆ ಒತ್ತಡದ ನಡುವೆಯೇ ಎರಡನೇ ಸೆಟ್ ನಲ್ಲಿ ಎಚ್ಚರಿಕೆಯ ಆಟವಾಡಿದ ಸೈನಾ ಎದುರಾಳಿ ಮರಿನ್ ಗೆ ಉತ್ತಮ ತಿರುಗೇಟು ನಿಡಿದರು. ಆದರೆ ಆಕ್ರಮಣಕಾರಿ ಆಟವಾಡಿದ ಮರಿನ್ 21-11 ಅಂತರದಿಂದ ಎರಡನೇ ಸೆಟ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮತ್ತೊಂದು ಪಂದ್ಯದಲ್ಲಿ ಭಾರತದ ಆಟಗಾರರಾದ ರಾಂಕಿರೆಡ್ಡಿ, ಪೊನ್ನಪ್ಪಗೆ ಸೋಲು
ಇನ್ನು ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಜೊಡಿಯು ಅಗ್ರ ಶ್ರೇಯಾಂಕಿತ ಚೀನಾದ ಜೋಡಿ ಜೆಮಗ್ಸಿವಿ ಮತ್ತು ಹುವಾಂಗ್ಯಾಂಗಿಯಾಂಗ್ ವಿರುದ್ಧ 17-21,10-21 ಅಂತರದ ಸೋಲು ಕಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SportsನವದೆಹಲಿNew DelhiBadmintonSaina Nehwalಸೈನಾ ನೆಹ್ವಾಲ್World Championships 2018ಕ್ರೀಡೆ. ಬ್ಯಾಡ್ಮಿಂಟನ್ವಿಶ್ವ ಚಾಂಪಿಯನ್ ಷಿಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


