ಕಾಮನ್'ವೆಲ್ತ್ ಕ್ರೀಡಾಕೂಟ 2018: ಬ್ಯಾಡ್ಮಿಂಟನ್ ಫೈನಲ್'ನಲ್ಲಿ ಸೈನಾ ನೆಹ್ವಾಲ್ ವಿರುದ್ಧ ಪಿವಿ. ಸಿಂಧು ಹಣಾಹಣಿ
21ನೇ ಕಾಮನ್'ವೆಲ್ತ್ ಕ್ರೀಡಾಕೂಡ ಬ್ಯಾಡ್ಮಿಂಟನ್'ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್'ಗೆ ಲಗ್ಗೆ ಇಟ್ಟಿದ್ದಾರೆ...

Published On :
ಗೋಲ್ಡ್'ಕೋಸ್ಟ್: 21ನೇ ಕಾಮನ್'ವೆಲ್ತ್ ಕ್ರೀಡಾಕೂಡ ಬ್ಯಾಡ್ಮಿಂಟನ್'ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್'ಗೆ ಲಗ್ಗೆ ಇಟ್ಟಿದ್ದಾರೆ.
ಭಾರತದ ಅಗ್ರ ಷಟ್ಲರ್ ಗಳಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಅಂತಿಮ ಕದನಕ್ಕೆ ಪ್ರವೇಶ ಮಾಡಿದ್ದು, ಕ್ಯಾರಾರಾ ಸ್ಫೋರ್ಟ್ಸ್ ಅರೇನಾದಲ್ಲಿ ನಡೆದ ಶನಿವರಾದ ಹೆಚ್ಚಿನ ಪಂದ್ಯಗಳಲ್ಲಿ ಭಾರತದ ಆಟಗಾರರು ಗೆಲವು ಸಾಧಿಸಿದರು.
ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್'ಶಿಪ್ ಬೆಳ್ಳಿ ಪದಕ ವಿಜೇತೆ ಸಿಂಧು ಅವರು, 21-18, 21-8 ರಿಂದ ಕೆನಡಾದ ಮಿಚೆಲಿ ಲಿ ಅವರನ್ನು ಸೋಲಿಸಿದರು.
2010ರ ಕಾಮನ್'ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಸೈನಾ ನೆಹ್ವಾಹ್ ಅವರು, ಸ್ಕಾಟ್ಲಂಡ್ನ ಕ್ರಿಸ್ಟಿ ಗಿಲ್ಮೋರ್ ಅವರನ್ನು 21-14, 18-21, 21-17 ರಿಂದ ಮಣಿಸಿದ್ದಾರೆ. ಇದರಂತೆ ಗೋಲ್ಡ್ ಕೋಸ್ಟ್ ಕಾಮನ್'ವೆಲ್ತ್ ಕ್ರೀಡಾಕೂಡದಲ್ಲಿ ಭಾರತದ ಷಟ್ಲರ್ ಗಳ ಭರ್ಜರಿ ನಿರ್ವಹಣೆ ಮುಂದುವರೆದಿದ್ದು, ಅಂತಿಮ ಹಣಾಹಣಿ ಭಾನುವಾರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Badmintonಬ್ಯಾಡ್ಮಿಂಟನ್Saina Nehwalಸೈನಾ ನೆಹ್ವಾಲ್ಫೈನಲ್PV SindhuFinalಪಿ.ವಿ. ಸಿಂಧುCommon Wealth Games 2018Gold Coastಗೋಲ್ಡ್ ಕೋಸ್ಟ್ಕಾಮನ್\'ವೆಲ್ತ್ ಕ್ರೀಡಾಕೂಟ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


