ಫಿಫಾ ರ್ಯಾಂಕಿಂಗ್: ಮತ್ತೆ ಅಗ್ರ ಸ್ಥಾನಕ್ಕೆ ಏರಿದ ಜರ್ಮನಿ
ಜರ್ಮನಿ ಫಿಫಾ ರ್ಯಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.ಫಿಪಾ ವಿಶ್ವ ಕಪ್ ಅರ್ಹತಾ ಪಂದ್ಯದ ನಂತರ ಜರ್ಮನಿ ತಾನು ಬ್ರಿಝಿಲ್ ನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ.

Published On :
ಜ್ಯೂರಿಚ್: ಜರ್ಮನಿ ಫಿಫಾ ರ್ಯಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.ಫಿಪಾ ವಿಶ್ವ ಕಪ್ ಅರ್ಹತಾ ಪಂದ್ಯದ ನಂತರ ಜರ್ಮನಿ ತಾನು ಬ್ರಿಝಿಲ್ ನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ.
ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ಮೂರನೇ ಸ್ಥಾನದಲ್ಲಿದೆ. ಅರ್ಜೆಂಟೀನಾ 4ನೇ ಸ್ಥಾನ ಮತ್ತು ಬೆಲ್ಜಿಯಂ 5ನೇ ಸ್ಥಾನದಲ್ಲಿದೆ.
ಯುರೋಪಿಯನ್ ತಂಡಗಳು, ಪ್ರತಿಯೊಬ್ಬರೂ ಎರಡು ಅರ್ಹತಾ ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ತಮ್ಮ ಎದುರಾಳಿ ದಕ್ಷಿಣ ಅಮೆರಿಕಾ ದೇಶಗಳ ವಿರುದ್ಧ ಗೆಲುವು ಸಾಧಿಸಿ ಮುಂಬರುವ ವಿಶ್ವ ಕಪ್ ಗೆ ಅರ್ಹತೆ ಗಳಿಸಿದರು.
ಫಿಪಾ ವಿಶ್ವ ಕಪ್ ನಡೆಸಿಕೊಡಲಿರುವ ರಷ್ಯಾ 64ನೇ ಸ್ಥಾನದಲ್ಲಿದೆ.
ಇನ್ನು ಪೋಲೆಂಡ್ 6ನೇ ಸ್ಥಾನದಲ್ಲಿದ್ದರೆ ನಂತರದಲ್ಲಿ ಸ್ವಿಜರ್ಲ್ಯಾಂಡ್, ಫ್ರಾನ್ಸ್, ಚಿಲಿ ಮತ್ತು ಕೊಲಂಬಿಯಾಗಳಿವೆ.
ಯುರೋಪ್ ಹೊರತಾಗಿ ಇತರೆ ಖಂದಗಳ ತಂಡಗಳಲ್ಲಿ ಮೆಕ್ಸಿಕೋ 14ನೇ ಇರಾನ್ 25ನೇ ಮತ್ತು ಈಜಿಪ್ಟ್ 30ನೇ ಸ್ಥಾನದಲ್ಲಿದೆ.
ನೂತನ ಪಟ್ಟಿಯಲ್ಲಿ ಭಾರತ 107ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BrazilGermanyಜರ್ಮನಿFIFAಫಿಫಾ ರ್ಯಾಂಕಿಂಗ್FIFA rankingWorld Cup qualifying programಫಿಪಾಬ್ರಿಝಿಲ್ಫಿಪಾ ವಿಶ್ವ ಕಪ್ ಅರ್ಹತಾ ಪಂದ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


