ಭಾರತ ಕ್ರಿಕೆಟ್ ತಂಡಕ್ಕೆ ತನ್ನದೇ ಖಾಸಗಿ ವಿಮಾನ ಬೇಕು: ಕಪಿಲ್ ದೇವ್ ಇಂಗಿತ
ವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಆಟಗಾರರ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಸಿಸಿಐ ಖಾಸಗಿ ವಿಮಾನವನ್ನು ಹೊಂದಿರಬೇಕು.

Published On :
ನವದೆಹಲಿ: ವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಅವರ ದಣಿವು ನಿವಾರಿಸಲು ಕನಿಷ್ಟ ಪ್ರಯತ್ನವಾಗಿ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿರಬೇಕು ಎಂದು ಬಾರತ ಕ್ರಿಕೆಟ್ ತಂದದ ಮಾಜಿ೮ ನಾಯಕ, ಕಪಿಲ್ ದೇವ್ ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಪಿಲ್ ದೇವ್ ಮಾತನಾಡಿ, ಬಿಸಿಸಿಐ ಈಗ ಉತ್ತಮ ಆದಾಯ ಹೊಂದಿದೆ. ಹಾಗಾಗಿ ಖಾಸಗಿ ವಿಮಾನ ಹೊಂದುವುದೇನೂ ಕಠಿಣವಾಗಲಾರದು. ವಿಮಾನ ಖರೀದಿಸುವ ಮೂಲಕ ಸಮಯ ಉಳಿತಾಯದೊಂದಿಗೆ ಆಟಗಾರರ ಜೀವನ ಕೂದ ತುಸು ಆರಾಮ ಆಗುತ್ತದೆ ಎಂದರು.
ಮುಂದುವರಿದು ಭವಿಷ್ಯದಲ್ಲಿ ಆಟಗಾರರು ತಮ್ಮದೇ ಆದ ಸ್ವಂತ ಖಾಸಗಿ ವಿಮಾನದೊಂದಿಗೆ ಆಗಮಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ತಿಳಿಸಿದರು.
ಬಿಸಿಸಿಐ ವಿಮಾನ ಖರೀದಿಸಿದರೆ ಇದರಿಂದ ಆಟಗಾರರಿಗೆ ಅವಶ್ಯಕ ವಿಶ್ರಾಂತಿ ದೊರಕುವುದಷ್ಟೇ ಅಲ್ಲದೆ 20 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಅಭಿಪ್ರಾಯ ಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಖಾಸಗಿ ವಿಮಾನKapil DevBoard of Control for Cricket in India (BCCI)1983 World CupBCCI\'s own planeಕಪಿಲ್ ದೇವ್ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)1983 ವಿಶ್ವಕಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


