ಡೆನ್ಮಾರ್ಕ್ ಓಪನ್: ಫೈನಲ್ ಗೇರಿದ ಭಾರತದ ಕಿಡಾಂಬಿ ಶ್ರೀಕಾಂತ್
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಪ್ರೀಮಿಯರ್ ಟೂರ್ನಿಯಲ್ಲಿ ತಮ್ಮ ಅದ್ಬುತ ಪ್ರದರ್ಶನ ಮುಂದುವರೆಸಿರುವ ಭಾರತದ ಕಿಡಾಂಬಿ ಶ್ರೀಕಾಂತ್ ಶನಿವಾರ ಫೈನಲ್ ಪ್ರವೇಶ ಮಾಡಿದ್ದಾರೆ.

Published On :
ಒಡೆನ್ಸ್: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಪ್ರೀಮಿಯರ್ ಟೂರ್ನಿಯಲ್ಲಿ ತಮ್ಮ ಅದ್ಬುತ ಪ್ರದರ್ಶನ ಮುಂದುವರೆಸಿರುವ ಭಾರತದ ಕಿಡಾಂಬಿ ಶ್ರೀಕಾಂತ್ ಶನಿವಾರ ಫೈನಲ್ ಪ್ರವೇಶ ಮಾಡಿದ್ದಾರೆ.
ನಿನ್ನೆ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್ ಹಾಂಕಾಂಗ್ ನ ವಾಂಗ್ ವಿಂಗ್ ಕೀ ವಿನ್ಸೆಂಟ್ ವಿರುದ್ಧ 21–18, 21–17 ನೇರ ಸೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದರು. ತೀವ್ರ ಕುತೂಹಲ ಕೆರಳಿಸಿದ್ದ ಸೆಮಿಫೈನಲ್ ಪಂದ್ಯ ಬರೋಬ್ಬರಿ 39 ನಿಮಿಷಗಳ ವರೆಗೂ ಸಾಗಿತು. ಈ ಪಂದ್ಯಕ್ಕೂ ಮುನ್ನ ನಾಲ್ಕು ಬಾರಿ ಪರಸ್ಪರ ಎದುರಾಗಿದ್ದ ಶ್ರೀಕಾಂತ್ ಹಾಗೂ ವಾಂಗ್ ವಿಂಗ್ ಕೀ ವಿನ್ಸೆಂಟ್ ತಲಾ ಎರಡೆರಡು ಪಂದ್ಯಗಳನ್ನು ಗೆದ್ದಿದ್ದರು. ಹೀಗಾಗಿ ಈ ಪಂದ್ಯ ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು.
ಇನ್ನು ಪಂದ್ಯದ ಬಳಿಕ ಮಾತನಾಡಿದ ಶ್ರೀಕಾಂತ್, ಪ್ರಸ್ತುತ ಜಯ ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಾಂಗ್ ವಿಂಗ್ ಕೀ ವಿನ್ಸೆಂಟ್ ಮತ್ತು ನನ್ನ ಪ್ರದರ್ಶನ ಒಂದೇ ತೆರನಾಗಿದೆಯಾದರೂ ಪಂದ್ಯದ ನಡುವೆ ನಾನು ಕೆಲ ತಪ್ಪುಗಳನ್ನು ಮಾಡಿದ್ದೆ. ಆದರೆ ಕೂಡಲೇ ಸರಿಪಡಿಸಿಕೊಂಡ ಕಾರಣ ಜಯ ಒಲಿಯಿತು. ಫೈನಲ್ ನಲ್ಲಿ ಲೀ ಯನ್ನು ಎದುರಿಸಬೇಕಿದ್ದು, ನಿಜಕ್ಕೂ ಆತ ಕಠಿಣ ಎದುರಾಳಿ ಎಂದು ಶ್ರೀಕಾಂತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆindiaಭಾರತBadmintonಬ್ಯಾಡ್ಮಿಂಟನ್Kidambi Srikanthಕಿಡಾಂಬಿ ಶ್ರೀಕಾಂತ್OdenseDenmark Super Series finalಒಡೆನ್ಸ್ಡೆನ್ಮಾರ್ಕ್ ಸೂಪರ್ ಸೀರಿಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


