ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್: 17ನೇ ಪ್ರಶಸ್ತಿ ಜಯಿಸಿದ ಪಂಕಜ್ ಅಡ್ವಾಣಿ
ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಐಬಿಎಸ್ ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ನಲ್ಲಿ 17ನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Published On :
ದೋಹಾ: ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಐಬಿಎಸ್ ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ನಲ್ಲಿ 17ನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫೈನಲ್ ಸುತ್ತಿನಲ್ಲಿ ಅಡ್ವಾಣಿ, ಇಂಗ್ಲೆಂಡ್‌ನ ಮೈಕ್ ರಸೆಲ್ ಅವರನ್ನು 6–2ರಲ್ಲಿ ಮಣಿಸಿದರು. 0–155, 150–128, 92–151, 151–6, 151–0, 150–58, 150–21 ಫ್ರೇಮ್‌ಗಳಲ್ಲಿ ಪಂಕಜ್ ಮುನ್ನಡೆ ಸಾಧಿಸಿದ್ದರು.
ಇದಕ್ಕೂ ಮುನ್ನ ಸೆಮಿ ಫೈನಲ್ಸ್ ನಲ್ಲಿ ಪಂಕಜ್ ಅವರು ಭಾರತದ ರೂಫೇಶ್ ಷಾ ಅವರನ್ನು 5–2 ಅಂತರದಿಂದ ಪರಾಭವಗೊಳಿಸಿದ್ದರು. ಇಂದು ನಡೆಯುವ ಐಬಿಎಸ್ ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಡಬಲ್ಸ್‌ನಲ್ಲಿ ಅಡ್ವಾಣಿ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪಂಕಜ್ ಅಡ್ವಾಣಿPankaj AdvaniIBSF World Billiards ChampionshipMike RussellRupesh Shahಐಬಿಎಸ್ ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಮೈಕ್ ರಸೆಲ್ರೂಫೇಶ್ ಷಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


