ಕುಡಿದು ವಾಹನ ಚಾಲನೆ: ಗಾಲ್ಫರ್ ಟೈಗರ್ ವುಡ್ಸ್ ಬಂಧನ, ಬಿಡುಗಡೆ!
ಅಮೆರಿಕದ ಖ್ಯಾತ ಗಾಲ್ಫ್ ಆಟಗಾರ ಟೈಗರ್‌ವುಡ್ಸ್ ರನ್ನು ಕುಡಿದು ವಾಹನ ಚಲಾಯಿಸಿದರೆಂಬ ಆರೋಪದ ಮೇರೆಗೆ ಸೋಮವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫ್ಲೋರಿಡಾ: ಅಮೆರಿಕದ ಖ್ಯಾತ ಗಾಲ್ಫ್ ಆಟಗಾರ ಟೈಗರ್‌ವುಡ್ಸ್ ರನ್ನು ಕುಡಿದು ವಾಹನ ಚಲಾಯಿಸಿದರೆಂಬ ಆರೋಪದ ಮೇರೆಗೆ ಸೋಮವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವುಡ್ಸ್ ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ದಕ್ಷಿಣ ಫ್ಲೋರಿಡಾದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸಿದ್ದಾರೆ ಎಂಬ ಆರೋಪದ ಮೇರೆಗೆ ಸ್ಥಳೀಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಫ್ಲೋರಿಡಾ ಜುಪಿಟರ್ ನ ಪಾಲಮ್ ಬೀಚ್ ನ ಕೌಂಟಿ ಜೈಲಿಗೆ ವುಡ್ಸ್‌ರನ್ನು ಬೆಳಗ್ಗೆ 7 ಗಂಟೆಗೆ ಕರೆತರಲಾಗಿತ್ತು ಮತ್ತು ನಂತರ ವುಡ್ಸ್ ಅವರನ್ನು ಮುಂಜಾನೆ 10.50ಕ್ಕೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯಾವುದೇ ದಾಖಲಾತಿಗಳನ್ನು ಪಡೆಯದೇ ವುಡ್ಸ್ ರನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೂಡ ಪೊಲೀಸರ ವಿರುದ್ಧ ಕೇಳಿಬಂದಿದೆ. ಫ್ಲೋರಿಡಾದ ಜ್ಯೂಪಿಟರ್ ಐಸ್ ಲ್ಯಾಂಡ್ ನಲ್ಲಿ ವುಡ್ಸ್ ಅವರ ಮನೆಯಿದ್ದು, ಕಳೆದ ಏಪ್ರಿಲ್‌ನಲ್ಲಿ ಬೆನ್ನುಹುರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವುಡ್ಸ್ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ.
ಕುಡಿದಿರಲಿಲ್ಲ, ಆದರೆ ವೈದ್ಯಕೀಯ ಔಷಧಿಗಳ ಪ್ರಭಾವವಿತ್ತು
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ವುಡ್ಸ್ ತಾವು ಕಾರು ಚಲಾಯಿಸುವಾಗ ಕುಡಿದಿರಲಿಲ್ಲ. ಆದರೆ ತಮ್ಮ ಬೆನ್ನುಹುರಿ ಚಿಕಿತ್ಸೆಗಾಗಿ ವೈದ್ಯರು ನೀಡಿದ್ದ ಔಷಧಿ ಮಂಪರು ತರಿಸಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


