ಪ್ರೋ ಕಬಡ್ಡಿ ಚೆನ್ನೈ ತಂಡ ಖರೀದಿಸಿದ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇದೀಗ ಪ್ರತಿಷ್ಠಿತ ಪ್ರೋ ಕಬ್ಬಡಿ ಲೀಗ್ ನ ಚೆನ್ನೈ ತಂಡವನ್ನು ಖರೀದಿಸಿದ್ದಾರೆ...

Published On :
ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇದೀಗ ಪ್ರತಿಷ್ಠಿತ ಪ್ರೋ ಕಬ್ಬಡಿ ಲೀಗ್ ನ ಚೆನ್ನೈ ತಂಡವನ್ನು ಖರೀದಿಸಿದ್ದಾರೆ.
ಚೆನ್ನೈ ತಂಡವನ್ನು ಸಚಿನ್ ಮತ್ತು ಉದ್ಯಮಿ ಎನ್ ಪ್ರಸಾದ್ ಜತೆಗೂಡಿ ಖರೀದಿಸಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ನೂತನ ತಂಡಗಳಾದ ಚೆನ್ನೈ(ತಮಿಳುನಾಡು), ಅಹಮದಾಬಾದ್(ಗುಜರಾತ್), ಹರಿಯಾಣ ಹಾಗೂ ಲಖನೌ ತಂಡಗಳ ಮಾಲೀಕರ ಹೆಸರುಗಳನ್ನು ಪ್ರಕಟಿಸಲಾಯಿತು.
ದೇಶೀಯ ಕ್ರೀಡಾ ಲೀಗ್ ಗಳಿಗೆ ಉತ್ತೇಜನ ನೀಡುವ ಸಲುವಾಗಿ ಸಚಿನ್ ಈಗಾಗಲೇ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್)ನಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್(ಪಿಬಿಎಲ್) ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಖರೀದಿಸಿದ್ದರು.
ಪ್ರೋ ಕಬಡ್ಡಿ ಲೀಗ್ ನಲ್ಲಿ ಕಳೆದ 4 ಆವೃತ್ತಿಗಳಲ್ಲಿ 8 ತಂಡಗಳು ಮಾತ್ರ ಸ್ಪರ್ಧಿಸುತ್ತಿದ್ದವು ಇದೀಗ ನಾಲ್ಕು ತಂಡಗಳು ಜತೆಯಾಗಿದ್ದು ಒಟ್ಟಾರೆ 12 ತಂಡಗಳು ಈ ಬಾರಿಯ ಲೀಗ್ ನಲ್ಲಿ ಸೆಣೆಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


