ವಿಶ್ವ ಹಾಕಿ ಲೀಗ್ ಫೈನಲ್: ಅರ್ಜೆಂಟೀನಾ ವಿರುದ್ಧ ಭಾರತ ಪರಾಭವ
ಒಡಿಶಾದ ನಡೆದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಅರ್ಜೆಂಟೀನಾ ವಿರುದ್ಧ 0-1 ಗೋಲುಗಳ ಅಂತರದಿಂದ .......

Published On :
ಭುವನೇಶ್ವರ: ಒಡಿಶಾದ ನಡೆದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಅರ್ಜೆಂಟೀನಾ ವಿರುದ್ಧ 0-1 ಗೋಲುಗಳ ಅಂತರದಿಂದ ಸೋಲುಂಡ ಭಾರತ ಸರಣಿಯಿಂದ ಹೊರನಡೆದಿದೆ. ಇದರೊಡನೆ ವಿಶ್ವ ಹಾಕಿ ಲೀಗ್ ಫೈನಲ್‌ನ ಪ್ರಶಸ್ತಿ ಸುತ್ತು ಪ್ರವೇಶಿಸುವ ಆಸೆಗೆ ತಣ್ಣೀರೆರಚಿದಂತಾಗಿದೆ.
ಪಂದ್ಯ ಪ್ರಾರಂಭದಿಂದಲೂ ಹಿಡಿತ ಸಾಧಿಸಿದ ಅರ್ಜೆಂಟೀನಾ ಭಾರತಕ್ಕೆ ಗೋಲು ಗಳಿಸುವ ಯಾವ ಅವಕಾಶವನ್ನೂ ನೀಡಲಿಲ್ಲ. 17 ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲುವ ಮೂಲಕ ಎದುರಾಳಿಗಳಿಗೆ ಮುನ್ನಡೆ ಹೊಂದಲು ಅವಕಾಶ ದೊರಕಿತು. ಅರ್ಜೆಂಟೀನಾದ ಗೊನ್ಸಾಲೊ ಪೆಲಟ್ ಚಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿ ಅವರ ತಂಡಕ್ಕೆ ನೆರವಾದರು. ಇದಾದ ನಂತರ ಭಾರತದ ತಂದ ಪ್ರಬಲ ಪೈಪೋಟಿ ನಿಡಿದರೂ ಸಹ ಗೋಲು ದಾಖಲಿಸಲು ವಿಫಲವಾಯಿತು.
ಡಿ.10ಕ್ಕೆ ಕಂಚಿನ ಪದಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ - ಜರ್ಮನಿ ಸೆಮಿ ಫೈನಲ್ಸ್ ನಲ್ಲಿ ಸೋತ ತಂಡದೊಡನೆ ಸೆಣಸಲಿದೆ. ಸರಣಿಯ ಇನ್ನೊಂದು ಪಂದ್ಯದಲ್ಲಿ ನೆದರ್ ಲ್ಯಾಂಡ್, ಇಂಗ್ಲೆಂಡ್ ನ್ನು 1–0 ಗೋಲುಗಳಿಂದ ಪರಾಭವಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅರ್ಜೆಂಟೀನಾHockey World LeagueArgentinaIndian men\'s hockeyKalinga StadiumGonzalo Peillatಭಾರತೀಯ ಪುರುಷರ ಹಾಕಿಹಾಕಿ ವಿಶ್ವ ಲೀಗ್ಕಳಿಂಗ ಕ್ರೀಡಾಂಗಣಗೊನ್ಸಾಲೊ ಪೆಲಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


