ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್: ಬೆಳ್ಳಿಗೆ ತೃಪ್ತರಾದ ಪಿವಿ ಸಿಂಧೂ
ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ ಸೋಲು ಕಂಡಿದ್ದು, ಜಪಾನಿನ ನೊಝೊಮಿ ಒಕುಹರ ವಿರುದ್ಧ ಸೋಲನುಭವಿಸುವ ಮೂಲಕ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
Published On :
ಗ್ಲಾಸ್ಗೊ: ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ ಸೋಲು ಕಂಡಿದ್ದು, ಜಪಾನಿನ ನೊಝೊಮಿ ಒಕುಹರ ವಿರುದ್ಧ ಸೋಲನುಭವಿಸುವ ಮೂಲಕ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಗ್ಲಾಸ್ಕೋದಲ್ಲಿ ನಡೆದ ಫೈನಲ್ ದಲ್ಲಿ ಒಕುಹರ ವಿರುದ್ಧದ ಪಂದ್ಯದಲ್ಲಿ ಸಿಂಧು ಅವರು 19-21, 22-20, 20-22 ಸೆಟ್‌ಗಳಿಂದ ವಿರೋಚಿತ ಸೋಲುಕಂಡರು. ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದರೂ 2ನೇ ಸೆಟ್ ನಲ್ಲಿ ತಿರುಗೇಟು ನೀಡಿದ್ದ ಸಿಂಧೂ ಅಂತಿಮ ಹಾಗೂ ನಿರ್ಣಾಯಕ
ಘಟದಲ್ಲಿ 20-22 ಸೆಟ್ ಗಳಿಂದ ಸೋಲನ್ನು ಅನುಭವಿಸಿದರು. ಇದಕ್ಕೂ ಮುನ್ನ, ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯುಫಿ ವಿರುದ್ಧ 48 ನಿಮಿಷಗಳಲ್ಲಿ 21-13, 21-10 ಸೆಟ್‌ಗಳಿಂದ ಸಿಂಧು ಜಯಗಳಿಸಿದ್ದರು. ಸಿಂಧು ಅವರು 2013 ಮತ್ತು 2014ರ ವಿಶ್ವ ಬ್ಯಾಡ್ಮಿಂಟನ್
ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆindiaಭಾರತBadmintonಬ್ಯಾಡ್ಮಿಂಟನ್PV SindhuWorld Badminton championshipಪಿವಿ ಸಿಂಧೂGlasgowಗ್ಲಾಸ್ಗೋವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

