ಆಟಕ್ಕೆ ಅಡ್ಡಿಯಾದ ಉದ್ದನೆಯ ಕೇಶ, ಮೈದಾನದಲ್ಲೇ ಕತ್ತರಿ ಹಾಕಿ ಪಂದ್ಯ ಗೆದ್ದ ಟೆನ್ನಿಸ್ ಆಟಗಾರ್ತಿ!
ಆಟಕ್ಕೆ ಅಡ್ಡಿಯಾದ ಉದ್ದನೆಯ ಕೂದಲನ್ನು ಮೈದಾನದಲ್ಲೇ ಕತ್ತರಿಸಿಕೊಂಡ ರಷ್ಯಾದ ಅನುಭವಿ ಆಟಗಾರ್ತಿ ಸ್ವೆಟ್ಲಾನಾ ಕುಜ್ನೆತ್ಸೋವಾ ಹಾಲಿ ಚಾಂಪಿಯನ್ ಆಗ್ನೆಸ್ಕಾ...

ಸಿಂಗಾಪುರ: ಆಟಕ್ಕೆ ಅಡ್ಡಿಯಾದ ಉದ್ದನೆಯ ಕೂದಲನ್ನು ಮೈದಾನದಲ್ಲೇ ಕತ್ತರಿಸಿಕೊಂಡ ರಷ್ಯಾದ ಅನುಭವಿ ಆಟಗಾರ್ತಿ ಸ್ವೆಟ್ಲಾನಾ ಕುಜ್ನೆತ್ಸೋವಾ ಹಾಲಿ ಚಾಂಪಿಯನ್ ಆಗ್ನೆಸ್ಕಾ ರಾಡ್ವಾಂಸ್ಕಾ ವಿರುದ್ಧ ಗೆದ್ದು ಬೀಗಿದ್ದಾರೆ.
ಸಿಂಗಾಪುರದಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸ್ವೆಟ್ಲಾನಾ ಕುಜ್ನೆತ್ಸೋವಾ ಹಾಗೂ ಆಗ್ನೆಸ್ಕಾ ರಡ್ವಾಂಸ್ಕಾ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿತ್ತು. ಮೊದಲ ಸೆಟ್ ಗೆದ್ದಿದ್ದ ಕುಜ್ನೆತ್ಸೋವಾ ಎರಡನೇ ಸೆಟ್ ನಲ್ಲಿ ಹೀನಾಯವಾಗಿ ಸೋತರು. ಇನ್ನು ಮೂರನೇ ಸೆಟ್ ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕುಜ್ನೆತ್ಸೋವಾ 1-2 ಹಿನ್ನಡೆಯಲ್ಲಿದ್ದಾಗ ಅಂಪೈರ್ ಬಳಿ ತಮಗೆ ಕತ್ತರಿ ಬೇಕೆಂದು ಬೇಡಿಕೆ ಇಟ್ಟರು. ನಂತರ ಬಾಲ್ ಬಾಯ್ ತಂದು ಕೊಟ್ಟ ಕತ್ತರಿಯಿಂದ ತಮ್ಮ ಕೂದಲನ್ನು ಕತ್ತರಿಸಿಕೊಂಡು ಆಟಕ್ಕೆ ಮುಂದಾದರು. ನಂತರ ಉತ್ತಮವಾಗಿ ಆಡಿದ ಕುಜ್ನೆತ್ಸೋವಾ ನಿರ್ಣಾಯಕ ಸೆಟ್ ನಲ್ಲಿ 7-5 ರಿಂದ ಗೆದ್ದರು.
ಆಟವಾಡುವಾಗ ನನ್ನ ಉದ್ದನೆಯ ಕೂದಲು ಭಾರಿ ಕಿರಿಕಿರಿ ತರುತ್ತಿತ್ತು. ನಾನದನ್ನು ಹೆಡ್ ಬ್ಯಾಂಡ್ ನಿಂದ ಬಂಧಿಸಿದ್ದೆ. ಆಧರೆ ದಪ್ಪಗಿರುವ ನನ್ನ ಕೂದಲು, ಪ್ರತಿ ಬಾರಿ ಮುಂಗೈ ಹೊಡೆತಕ್ಕೆ ಮುಂದಾಗುತ್ತಿದ್ದಾಗ ನನ್ನ ಕಣ್ಣಿಗೆ ಬಂದು ಬಡಿಯುತ್ತಿತ್ತು. ಇದರಿಂದ ಕಷ್ಟವಾಗುತ್ತಿತ್ತು ಎಂದು ಕುಚ್ನೆತ್ಸೋವಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


