ಪಾರ್ಮುಲಾ 4 ಸೌತ್ ಈಸ್ಟ್ ಏಷ್ಯಾ ಚಾಂಪಿಯನ್‍ಶಿಪ್‍ನಲ್ಲಿ ಆಕಾಶ್‍ಗೌಡ ಮುನ್ನಡೆ
ಇತ್ತೀಚೆಗೆ ಇಂಡೋನೇಷಿಯಯಾದಲ್ಲಿ ಮುಕ್ತಾಯವಾದ ರೌಂಡ್-3 ಪಾರ್ಮುಲಾ 4, ಸೌತ್ ಈಸ್ಟ್ ಏಷ್ಯಾ ಚಾಂಪಿಯನ್‍ಶಿಪ್‍ನಲ್ಲಿ ಮೂರು ಬಾರಿ ಪ್ರಶಸ್ತಿ ಸಂಪಾದಿಸಿದ್ದ ಬೆಂಗಳೂರಿನ ಬಾಲಕ ಆಕಾಶ್ ಗೌಡ ಈಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಇಂಡೋನೇಷಿಯಯಾದಲ್ಲಿ ಮುಕ್ತಾಯವಾದ ರೌಂಡ್-3 ಪಾರ್ಮುಲಾ 4, ಸೌತ್ ಈಸ್ಟ್ ಏಷ್ಯಾ ಚಾಂಪಿಯನ್‍ಶಿಪ್‍ನಲ್ಲಿ ಮೂರು ಬಾರಿ ಪ್ರಶಸ್ತಿ ಸಂಪಾದಿಸಿದ್ದ ಬೆಂಗಳೂರಿನ ಬಾಲಕ ಆಕಾಶ್ ಗೌಡ ಈಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಇದೇ ನವೆಂಬರ್ 12 ಮತ್ತು 13 ರಂದು ಇಂಡೋನೆಷಿಯಾದ ಸೆಂಥುಲ್ ಅಂತಾರಾಷ್ಟ್ರೀಯ ಸರ್ಕಿಟ್‍ನಲ್ಲಿ ಸಹ ಗೆಲುವಿನ ಹಾದಿಯಲ್ಲೇ ಸಾಗಿದ್ದಾರೆ.
ಮೊದಲ ವರ್ಷದಲ್ಲೇ ಆಕಾಶ್‍ಗೌಡ 3ನೇ ಸ್ಥಾನದಲ್ಲಿದ್ದಾರೆ. ಮೂರು ಸುತ್ತು ಪೂರ್ಣಗೊಂಡಿದ್ದು, ಇನ್ನು ಮೂರು ಸುತ್ತಿನ ಸ್ಪರ್ಧೆಗಳು ನಡೆಯಲಿವೆ.
ಅರ್ಮನ್ ಇಬ್ರಾಹಿಂ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಆಕಾಶ್, ಗೆಲವು ‘ಅಮೋಘವಾಗಿತ್ತು. ಸಂತೋಷವಾಯಿತು’ ಎಂದು ಆಕಾಶ ಗೆಲುವಿನ ನಂತರ ಅವರು ಪ್ರತಿಕ್ರಿಯಿಸಿದರು.
ವಾರಾಂತ್ಯದಲ್ಲಿ ನಡೆದ ರೇಸ್-5 ರಲ್ಲಿ ಗೌಡ, ಫೈನೆ ಕಹಿಯಾ ಮತ್ತು ಪ್ರೆಸ್ಲೆ ಮಾರ್ಟೋನೊ ಅವರನ್ನು ಗೆಲುವಿಗಾಗಿ ಎದುರಿಸಬೆಕಾಯಿತು. ರೇಸ್ ಸಾಗಿದಂತೆ ಮಾರ್ಟೋನೊ ವಿರುದ್ಧ ಕಹಿಯಾ ಮುನ್ನಡೆ ಸಾಧಿಸಿದರು.
ಅಂತಿಮ ಸ್ಪರ್ಧೆ 6 ರಲ್ಲಿ ಗೆಲುವಿಗಾಗಿ ಗೌಡರವರು ತ್ರಿಕೋನ ಸ್ಪರ್ಧೆ ಎದುರಿಸಬೇಕಾಯಿತು. ಇಂಡೋನೇಷಿಯಾದ ತೇವಾಂಶದಿಂದ ಕೂಡಿದ್ದ ಪರಿಸ್ಥಿತಿಯಲ್ಲಿ ಕಹಿಯಾ ಮತ್ತು ಮಾರ್ಟೋನೊ ಅವರನ್ನು ಎದುರಿಸಿದರು. ಅಂತಿಮವಾಗಿ ಮಾರ್ಟೋನೊ ಹಾಗೂ ಗೌಡ ಅವರನ್ನು ಹಿಂದಿಕ್ಕಿ ಕಹಿಯಾ ಸತತ ಎರಡನೇ ಗೆಲುವು ಪಡೆದರು.
ನಿರಂತರ ಉತ್ತಮ ಪ್ರದರ್ಶನ ಹಾಗೂ ಸತತ ಪ್ರಶಸ್ತಿಯನ್ನು ಗೆಲ್ಲುತ್ತಿರುವ ಆಕಾಶ್‍ಗೌಡ ಚಾಂಪಿಯನ್‍ಶಿಪ್‍ನಲ್ಲಿ 224 ಪಾಯಿಂಟ್ ಕಲೆ ಹಾಕಿ 3ನೇ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಪ್ರೆಸ್ಲೆ ಮಾರ್ಟೋನೊ ಅವರಿಗಿಂತ 3 ಪಾಯಿಂಟ್‍ಗಳಿಂದ ಹಾಗೂ ಮೊದಲಿಗರಾಗಿರುವ ಕಹಿಯಾ ಅವರಿಗಿಂತ 42 ಪಾಯಿಂಟ್‍ಗಳಿಂದ ಹಿಂದಿದ್ದಾರೆ.
ಇನ್ನು ಮೂರು ಸುತ್ತಿನ ಸ್ಪರ್ಧೆ ಬಾಕಿ ಉಳಿದಿದ್ದು, ಆಕಾಶಗೌಡ ಪಾರ್ಮುಲಾ 4 ಸೌತ್‍ಈಸ್ಟ್ ಏಷ್ಯಾ ಚಾಂಪಿಯನ್‍ಶಿಪ್ ಗೆದ್ದ ಮೊದಲ ಭಾರತೀಯರಾಗುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


