ನಾಯಿ ಊಟದ ರುಚಿ ನೋಡಿದ ಟೆನಿಸ್ ಆಟಗಾರ್ತಿಯ ಫಜೀತಿ ಏನಾಯ್ತು ಗೊತ್ತಾ!
ತನ್ನ ಸಾಕು ನಾಯಿಯ ಊಟದ ರುಚಿ ನೋಡಲು ಹೋಗಿ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಹೊಟ್ಟೆ ನೋವಿನಿಂದ ಒದ್ದಾಡಿದ ಘಟನೆ ರೋಮ್ ನಲ್ಲಿ ನಡೆದಿದೆ.

ರೋಮ್: ತನ್ನ ಸಾಕು ನಾಯಿಯ ಊಟದ ರುಚಿ ನೋಡಲು ಹೋಗಿ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಹೊಟ್ಟೆ ನೋವಿನಿಂದ ಒದ್ದಾಡಿದ ಘಟನೆ ರೋಮ್ ನಲ್ಲಿ ನಡೆದಿದೆ.
ಇಟಾಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಇಂತಹುದೊಂದು ಪೇಚಾಟಕ್ಕೆ ಸಿಲುಕಿ ಒದ್ದಾಡಿದ್ದಾರೆ. ಇಟಾಲಿಯನ್ ಓಪನ್ ಟೂರ್ನಿ ನಿಮಿತ್ತ ರೋಮ್ ನ ಖಾಸಗಿ ಹೊಟೆಲ್ ನಲ್ಲಿ ಉಳಿದುಕೊಂಡಿರುವ ಸೆರೆನಾ ತಮ್ಮೊಂದಿಗೆ ತಮ್ಮ ಸಾಕು ನಾಯಿಯನ್ನು ಕೂಡ ಕರೆತಂದಿದ್ದರು. ಹೊಟೆಲ್ ಸಿಬ್ಬಂದಿ ಸಾಕು ನಾಯಿಗೆಂದೇ ವಿಶೇಷ ಮೆನು ತಯಾರಿಸಿದ್ದು, ಕುತೂಹಲದಿಂದ ಸೆರೆನಾ ತಮ್ಮ ನಾಯಿಗೆ ನೀಡಿದ್ದ ಊಟದ ರುಚಿ ನೋಡಿದ್ದಾರೆ. ಬಳಿಕ ಕೆಲವೇ ಕ್ಷಣಗಳಲ್ಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಸತತ ಶೌಚಾಲಯಕ್ಕೆ ಪರೇಡ್ ಮಾಡಬೇಕಾದ ಸ್ಥಿತಿ ಸೆರೆನಾಗೆ ಎದುರಾಯಿತಂತೆ.
ಈ ವಿಚಾರವನ್ನು ಸ್ವತಃ ಸೆರೆನಾ ವಿಲಿಯಮ್ಸ್ ಸಾಮಾಜಿಕ ಜಾಲತಾಣಗದಲ್ಲಿ ಹಂಚಿಕೊಂಡಿದ್ದು, ಸಾಕು ಪ್ರಾಣಿಗೆ ನೀಡಿದ್ದ ಆಹಾರವನ್ನು ಮಾನವರು ತಿನ್ನಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಕು ನಾಯಿಗಾಗಿ ನೀಡಲಾಗಿದ್ದ ಮೆನುವಿನಲ್ಲಿ ನಾವು ತಿನ್ನುವ ಸಾಲ್ಮನ್ ರೆಸಿಪಿ ಇತ್ತು. ಹಾಗಾಗಿ ಒಂದು ಸ್ಪೂನ್ ಟೇಸ್ಟ್ ನೋಡುವ ಎಂದೆನಿಸಿ ಒಂದೇ ಒಂದು ಸ್ಪೂನ್ ತಿಂದೆ. ಅದಾದ ಸ್ವಲ್ಪ ಹೊತ್ತಲ್ಲಿ ಹೊಟ್ಟೆ ನೋವು ಬಂದು ಟಾಯ್ಲೆಟ್ಗೆ ಹೋಗುವ ಪರಿಸ್ಥಿತಿ ಬಂತು! ಎಂದು ಹೇಳಿಕೊಂಡಿದ್ದಾರೆ.
ನಾಯಿಯ ಆಹಾರ ಮನುಷ್ಯರು ತಿನ್ನುವಂತದ್ದಲ್ಲ. ಅದೊಂದು ರೀತಿಯ ಮನೆ ಸ್ವಚ್ಛ ಮಾಡುವ ಡಿಟರ್ಜೆಂಟ್ನಂತೆ ಇತ್ತು! ಎಂದು ವಿಶ್ವದ ನಂಬರ್ 1 ಆಟಗಾರ್ತಿ ಸೆರೆನಾ ತನ್ನ ಅವಾಂತರಗಳನ್ನು ಹೇಳಿಕೊಂಡಿದ್ದಾರೆ. ನಾಯಿಯ ಸಾಲ್ಮನ್ ಊಟವನ್ನು ನೋಡಿದರೆ ಯಾರೇ ಆದರೂ ವಾಮಿಟ್ ಮಾಡಿಕೊಳ್ಳುತ್ತಾರೆ, ಬೇಕಿದ್ದರೆ ನೋಡಿ ಎಂದು ಆಹಾರವನ್ನೂ ತೋರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


