ಕ್ರೀಡೆ

ಮ್ಯಾಡ್ರಿಡ್ ಓಪನ್: ಜೊಕೊವಿಚ್‌ಗೆ ಕಿರೀಟ, ಪರಾಭವಗೊಂಡ ಬೋಪಣ್ಣ-ಮರ್ಗಿಯಾ ಜೋಡಿ

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜೊಕೊವಿಚ್ ಎರಡನೇ ಶ್ರೇಯಾಂಕಿತ ಮುರ್ರೆ ಅವರನ್ನು 6-2, 3-6, 6-3 ಅಂತರದಲ್ಲಿ ಪರಾಭವ...

ಮ್ಯಾಡ್ರಿಡ್ ಓಪನ್: ಜೊಕೊವಿಚ್‌ಗೆ ಕಿರೀಟ, ಪರಾಭವಗೊಂಡ ಬೋಪಣ್ಣ-ಮರ್ಗಿಯಾ ಜೋಡಿ
ನೊವಾಕ್ ಜೊಕೊವಿಚ್ (ಕೃಪೆ: ಎಪಿ)
Published On :
ಮ್ಯಾಡ್ರಿಡ್: ಆ್ಯಂಡಿ ಮುರ್ರೆ ಅವರನ್ನು ಪರಾಭವಗೊಳಿಸಿ ನೊವಾಕ್ ಜೊಕೊವಿಚ್ ಮ್ಯಾಡ್ರಿಡ್ ಓಪನ್ ಟೆನಿಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ  ಜೊಕೊವಿಚ್ ಎರಡನೇ ಶ್ರೇಯಾಂಕಿತ ಮುರ್ರೆ ಅವರನ್ನು  6-2, 3-6, 6-3 ಅಂತರದಲ್ಲಿ ಪರಾಭವಗೊಳಿದ್ದಾರೆ.  ಜೊಕೋವಿಚ್ ವೃತ್ತಿ ಜೀವನದಲ್ಲಿ 29ನೇ ಮಾಸ್ಟರ್ಸ್ ಕಿರೀಟ ಇದಾಗಿದೆ. 
ಮ್ಯಾಡ್ರಿಡ್‌ನಲ್ಲಿ ಎರಡನೇ ಕಿರೀಟ ಮತ್ತು ಪ್ರಸಕ್ತ ವರ್ಷದ 5 ನೇ ಕಿರೀಟವನ್ನು  ಜೊಕೊವಿಚ್ ಈ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ. ಎಟಿಪಿ ಟೂರ್‌ನಲ್ಲಿ ಇವರು 33ನೇ ಬಾರಿ ಗೆಲುವು ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಆ್ಯಂಡಿ ಮುರ್ರೆ ಪರಾಭವಗೊಂಡ ಕಾರಣ ಈತನನ್ನು ಹಿಂದಿಕ್ಕಿ ರೋಜರ್ ಫೆಡರರ್ ವಿಶ್ವ ರ್ಯಾಂಕ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿದ್ದಾರೆ.
ಡಬಲ್ಸ್ ನಲ್ಲಿ  ಬೋಪಣ್ಣ - ಮರ್ಗಿಯಾ ಜೋಡಿ ಪರಾಭವ
ಭಾರತದ ಅಗ್ರಶ್ರೇಯಾಂಕದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಮತ್ತು ರೋಮೆನಿಯಾದ ಫ್ಲೊರಿನ್ ಮರ್ಗಿಯಾ ಜೋಡಿಯು ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಭಾನುವಾರ ಪರಾಭವಗೊಂಡಿದೆ. 
ಫೈನಲ್ ಪಂದ್ಯದಲ್ಲಿ ಡಚ್‌–ರೊಮೆನಿಯಾದ ಜೋಡಿ ಜೀನ್ ಜುಲಿಯನ್ ರೋಜರ್ ಮತ್ತು ಹೊರಿಯಾ ಟೆಕಾವು ವಿರುದ್ಧ   ಬೋಪಣ್ಣ - ಮರ್ಗಿಯಾ  ಜೋಡಿ 4–6, 6–7 (5) ರಿಂದ ಸೋಲು ಅನುಭವಿಸಿದ್ದಾರೆ.  
ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು  ಮತ್ತು  ಅಗ್ರ ಹತ್ತು ಆಟಗಾರರಲ್ಲಿ ಸ್ಥಾನ ಪಡೆಯಬೇಕಾದರೆ ಬೋಪಣ್ಣ ಅವರಿಗೆ ಈ ಪಂದ್ಯದ ಗೆಲುವು  ಅನಿವಾರ್ಯವಾಗಿತ್ತು.  ಆದರೆ, ಎದುರಾಳಿ ಜೋಡಿಯ ಶಿಸ್ತಿನ ಆಟದ ಮುಂದೆ ಬೋಪಣ್ಣ  ಜೋಡಿಯು ಸೋಲನುಭವಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.