ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ ವಿಧಿವಶ
ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ (68) ವಿಧಿವಶರಾಗಿದ್ದಾರೆ. ಕೆಲವು ವರ್ಷಗಳಿಂದ ಶ್ವಾಸಕೋಶ ಅರ್ಬುದದಿಂದ ಇವರು ಬಳಲುತ್ತಿದ್ದರು...

Published On :
ಬಾರ್ಸಿಲೋನಾ: ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ (68) ವಿಧಿವಶರಾಗಿದ್ದಾರೆ. ಕೆಲವು ವರ್ಷಗಳಿಂದ ಶ್ವಾಸಕೋಶ ಅರ್ಬುದದಿಂದ ಇವರು ಬಳಲುತ್ತಿದ್ದರು. ಆಟಗಾರನಾಗಿಯೂ, ಕೋಚ್ ಆಗಿಯೂ ಕ್ರೈಫ್ ಫುಟ್ಬಾಲ್ ಇತಿಹಾಸದಲ್ಲಿ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದರು.
ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ ಬಾಲನ್ ಡಿ ಓರ್ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಇವರು ಮೂರು ಬಾರಿ ಗೆದ್ದಿದ್ದಾರೆ. ಡಚ್ ಫುಟ್ಬಾಲ್ ಕ್ಲಬ್ ಅಯಾಕ್ಸ್ ಸತತವಾಗಿ ಮೂರು ಬಾರಿ ಯುರೋಪಿಯನ್ ಚಾಂಪಿಯನ್ಸ್ ಆಗಿದ್ದು ಕ್ರೈಫ್ ರ ಸಾಮರ್ಥ್ಯದಿಂದಾಗಿತ್ತು.
1988ರಲ್ಲಿ ಸ್ಪಾನಿಷ್ ಕ್ಲಬ್ ಬಾರ್ಸಿಲೋನಾದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಇವರು 1992ರಲ್ಲಿ ಮೊದಲ ಬಾರಿಗೆ ಯುರೋಪ್ಯನ್ ಕಪ್ ಗೆಲ್ಲುವಂತೆ ಮಾಡಿದರು.
ಆಲ್ರೌಂಡರ್ ಆಗಿದ್ದ ಕ್ರೈಫ್ ಒಂದು ಕಾಲದಲ್ಲಿ ಬಾರ್ಸಿಲೋನಾದ ಅತ್ಯುತ್ತಮ ಕ್ರೀಡಾಪಟುವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


