ಕ್ರೀಡೆ

ಇದು ವೆಸ್ಟ್ ಇಂಡೀಸ್ ಗೆ ಆಟದ ಗುಣಮಟ್ಟ ಹೆಚ್ಚಿಸುವ ಸಮಯ: ಸೌರವ್ ಗಂಗೂಲಿ

ಜಮೈಕಾದಲ್ಲಿ ಶನಿವಾರದಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆಡಲಿದೆ. ಗೆಲುವಿನಿಂದ ದೊರೆತ ಆತ್ಮವಿಶ್ವಾಸ ಎಂದು ಹೇಳುವುದಕ್ಕಿಂತಲೂ ತಂಡದ ಕ್ರಿಕೆಟ್ ಆಟದ ಶಿಸ್ತು ಎರಡನೇ ಟೆಸ್ಟ್ ಪಂದ್ಯಕ್ಕೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಅಂಶವಾಗಲಿದೆ.

ಇದು ವೆಸ್ಟ್ ಇಂಡೀಸ್ ಗೆ ಆಟದ ಗುಣಮಟ್ಟ ಹೆಚ್ಚಿಸುವ ಸಮಯ: ಸೌರವ್ ಗಂಗೂಲಿ
ಇದು ವೆಸ್ಟ್ ಇಂಡೀಸ್ ಗೆ ಆಟದ ಗುಣಮಟ್ಟ ಹೆಚ್ಚಿಸುವ ಸಮಯ: ಸೌರವ್ ಗಂಗೂಲಿ
Published On :
ಆಂಟಿಗುವಾದಲ್ಲಿ ಭಾರತದ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಸಾಧಿಸಿರುವ ಜಯದಿಂದ ದೊರೆತಿರುವ ಆತ್ಮವಿಶ್ವಾಸದಲ್ಲೇ, ಜಮೈಕಾದಲ್ಲಿ ಶನಿವಾರದಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆಡಲಿದೆ. ಗೆಲುವಿನಿಂದ ದೊರೆತ ಆತ್ಮವಿಶ್ವಾಸ ಎಂದು ಹೇಳುವುದಕ್ಕಿಂತಲೂ ತಂಡದ ಕ್ರಿಕೆಟ್ ಆಟದ ಶಿಸ್ತು ಎರಡನೇ ಟೆಸ್ಟ್ ಪಂದ್ಯಕ್ಕೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಅಂಶವಾಗಲಿದೆ.    
ಭಾರತ ತಂಡ ವಿಶ್ವದ ಬಲಿಷ್ಠ ತಂಡದೊಂದಿಗೆ ಸೆಣೆಸುತ್ತಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ಭಾರತ ತಂಡ ತನಗೆ ಸಿಕ್ಕಿರುವ ತಂಡದೊಂದಿಗೆ ಸೆಣೆಸುತ್ತಿದ್ದು, ಈ ಸರಣಿಯನ್ನು ಸ್ಪರ್ಧಾತ್ಮಕವಾಗಿಸಬೇಕಾದರೆ ವೆಸ್ಟ್ ಇಂಡೀಸ್ ತಂಡ ಅವರ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ.  ಭಾರತ ತಂಡ ವೇಗಿಗಳು ಮಾಡಿದ ಬೌಲಿಂಗ್ ಮಾಡಿದ ರೀತಿಯ ಭರವಸೆಯಿಂದ ಯಾವುದೇ ರೀತಿಯ ಬದಲಾವಣೆ ಮಾಡದೇ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾತ್ ಕೋಹ್ಲಿ ಗೆ ಸಂತೃಪ್ತಿಯಾಗುವ ವಿಷಯವೆಂದರೆ ಅದು ಆಂಟಿಗುವಾ ಪಿಚ್ ನಲ್ಲಿ ವೇಗಿಗಳು ಬೌಲ್ ಮಾಡಿದ ಗತಿಯಾಗಿದ್ದರೆ, ಮತ್ತಷ್ಟು ಸಂತೃಪ್ತಿಕರ ವಿಷಯ ವೇಗಿಗಳ ಸ್ಥಿರತೆ. ಲೈನ್ ಹಾಗೂ ಲೆಂತ್ ಗಳ ವಿಷಯದಲ್ಲಿ ವೇಗಿಗಳು ತಪ್ಪು ಮಾಡುವಂತೆ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಗಳು ವೇಗಿಗಳಿಗೆ ಒತ್ತಡ ಹೇರುತ್ತಾರೆ. ಆದರೆ ವೆಸ್ಟ್ ಇಂಡೀಸ್ ತಂಡದ ಆಟಗಾರರ್ಯಾರೂ ಭಾರತ ತಂಡದ ಬೌಲರ್ ಗಳ ಮೇಲೆ ಇಂತಹ ಒತ್ತಡ ಹೇರಲಿಲ್ಲ.  ವೆಸ್ಟ್ ಇಂಡೀಸ್ ತನ್ನ ಪ್ರದರ್ಶನ/ ಆಟವನ್ನು ಹೇಗೆ ಉತ್ತಮಗೊಳಿಸುತ್ತದೆ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಭಾರತ ಹೆಚ್ಚು ಗಮನಹರಿಸಬೇಕಿಲ್ಲ. ವೆಸ್ಟ್ ಇಂಡೀಸ್ ತಂಡ ಅಲ್ಜಾರ್ರಿ ಜೋಸೆಫ್ ಎಂಬ ಹೊಸ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈಗಿರುವ ವೆಸ್ಟ್ ಇಂಡೀಸ್ ತಂಡದ ಉಳಿದ ವೇಗಿಗಳಿಂದ ವಿರಾಟ್ ಕೋಹ್ಲಿ ಹಾಗೂ ತಂಡಕ್ಕೆ ಪಂದ್ಯ ಗೆಲ್ಲುವುದು ಸುಲಭವಾಯಿತು. 
ವೆಸ್ಟ್ ಇಂಡೀಸ್ ತಂಡದಲ್ಲಿಯೂ ಸಹ ಅನೇಕ ಉತ್ತಮ ಆಟಗಾರರಿದ್ದು ಯಾವುದೇ ಟೆಸ್ಟ್ ಪಂದ್ಯಗಳಲ್ಲಿ 250 ರನ್ ಗಳು ಬೃಹತ್ ಮೊತ್ತವಾಗುವುದಿಲ್ಲ. ಬ್ಯಾಟ್ಸ್ ಮನ್ ಗಳು ಮತ್ತಷ್ಟು ರನ್ ಗಳನ್ನು ಕಲೆಹಾಕಲು ಯತ್ನಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.