ಮೂರನೇ ವಿವಾಹವಾದ ಬ್ರೆಜಿಲ್ ಫುಟ್ ಬಾಲ್ ದಂತಕತೆ ಪೀಲೆ!
ಬ್ರಿಜಿಲ್ ಫುಟ್ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.

ರಿಯೋ ಡಿ ಜನೈರೊ: ಬ್ರಿಜಿಲ್ ಫುಟ್ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಪೀಲೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೆಲವೇ ಆಪ್ತರ ಸಮ್ಮುಖದವಲ್ಲಿ ವಿವಾಹವಾಗಿರುವುದಾಗಿ ಪೀಲೆ ಹೇಳಿಕೊಂಡಿದ್ದಾರೆ. 1980ರಲ್ಲಿ ನ್ಯೂಯಾರ್ಕ್ ನಲ್ಲಿ ಪೀಲೆ ಮತ್ತು ಅಒಕಿ ಪರಸ್ಪರ ಎದುರಾಗಿದ್ದರು. ಆದರೆ ಬಳಿಕ ಈ ಜೋಡಿ ಮತ್ತೆ ಎದುರಾಗಿದ್ದು 2010ರಲ್ಲಿ. ಸಾವೋ ಪೋಲೋದಲ್ಲಿ ಮಾಲ್ ಒಂದರ ಎಲಿವೇಟರ್ ನಲ್ಲಿ ಪೀಲೆ ಮತ್ತು ಅಒಕಿ ಮತ್ತೆ ಎದುರಾಗಿದ್ದೆವು ಎಂದು ಪೀಲೆ ಹೇಳಿದ್ದಾರೆ.
ನಂತರ 2012ರಂದು ಮೊನಾಕೊದಲ್ಲಿ ನಡೆದ ಫುಟ್ಬಾಲ್ ಪ್ರಶಸ್ತಿ ಸಮಾರಂಭದಲ್ಲಿ 42 ವರ್ಷದ ಮರ್ಸಿಯಾರನ್ನು ಪರಿಚಯ ಮಾಡಿಕೊಂಡಿದ್ದ ಪೀಲೆ, ಕಳೆದ ಆರು ವರ್ಷಗಳಿಂದ ಮರ್ಸಿಯಾ ಜತೆಗೆ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಅಧಿಕೃತವಾಗಿ ಮರ್ಸಿಯಾರನ್ನು ವಿವಾಹವಾಗಿದ್ದಾರೆ. ಇನ್ನು ಮೊದಲ ಪತ್ನಿ ರೋಸಿಮೇರಿ ಜತೆಗೆ ಪೀಲೆ ಹನ್ನೆರಡು ವರ್ಷ ಜೀವನ ಸಾಗಿಸಿದ್ದು, ಅವರ ಎರಡನೇ ಪತ್ನಿ ಗಾಯಕಿ ಅಸ್ಸಿರಿಯಾ ನೆಸಿಮೆಂಟೋ ಜತೆಗೆ ಹದಿನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


