ಕ್ರೀಡೆ

ತೆರಿಗೆ ವಂಚನೆ: ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ತಾರೆ ಅರ್ಜೈಂಟೀನಾ ಹಾಗೂ ಬಾರ್ಸಿಲೋನಾ ತಂಡದ ಫುಟ್ಬಾಲ್ ಖ್ಯಾತ ಆಟಗಾರ ಲಿಯೋನಲ್...

ತೆರಿಗೆ ವಂಚನೆ: ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ
ಲಿಯೋನಲ್ ಮೆಸ್ಸಿ
Published On :

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ತಾರೆ ಅರ್ಜೈಂಟೀನಾ ಹಾಗೂ ಬಾರ್ಸಿಲೋನಾ ತಂಡದ ಫುಟ್ಬಾಲ್ ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿಗೆ ಸ್ಪ್ಯಾನಿಷ್ ಕೋರ್ಟ್ 21 ತಿಂಗಳ ಕಾಲ ಜೈಲು ವಾಸ ಶಿಕ್ಷೆ ವಿಧಿಸಿದೆ.

ಲಿಯೋನಲ್ ಮೆಸ್ಸಿ ಹಾಗೂ ಆತನ ತಂದೆ ಜಾರ್ಜ್ ಹಾರ್ಸಿಯೋ ಮೆಸ್ಸಿ ತೆರಿಗೆ ವಂಚನೆ ಮಾಡಿರುವುದು ಸಾಬೀತಾಗಿದ್ದು, ಮೆಸ್ಸಿ 15 ಕೋಟಿ ಹಾಗೂ ತಂದೆ 11 ಕೋಟಿ ದಂಡ ಕಟ್ಟಿ 21 ತಿಂಗಳ ಸೆರೆಮನೆ ವಾಸ ಅನುಭವಿಸಬೇಕಿದೆ.

ಸ್ಪ್ಯಾನಿಷ್ ಕಾನೂನು ಪ್ರಕಾರ, 2 ವರ್ಷಕ್ಕಿಂತ ಕಡಿಮೆ ಅವಧಿಗೆ ಜೈಲು ಶಿಕ್ಷೆಯಾದರೆ ಅಂತಹ ಅಪರಾಧಿ ಜೈಲಿನಲ್ಲಿ ಶಿಕ್ಷೆ ಅನುಭವಿಸುವುದಕ್ಕೆ ಬದಲಾಗಿ ಮನೆಯಲ್ಲೇ ಇರಬಹುದಾಗಿದ್ದು ಮೇಲ್ವಿಚಾರಕರೊಬ್ಬರು ಅವರನ್ನು ಗಮನಿಸಲಿದ್ದಾರೆ.

ಲಿಯೋನಲ್ ಮೆಸ್ಸಿ ಹಾಗೂ ಆತನ ತಂದೆ ಜಾರ್ಜ್ ಹಾರ್ಸಿಯೋ ಮೆಸ್ಸಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಬೆಲಿಜ್ ಹಾಗೂ ಉರುಗ್ವೆಯಲ್ಲಿ ನಕಲಿ ಕಂಪನಿಗಳು ತೆರೆದಿದ್ದು, ತಂದೆ ಮಗ ಇಬ್ಬರು 4.6 ಮಿಲಿಯನ್ ಡಾಲರ್ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.