ಕಿರಿಯರ ವಿಶ್ವಕಪ್: ಆತಿಥೇಯ ಬಾಂಗ್ಲಾದೇಶ ಶುಭಾರಂಭ
ಬುಧವಾರ ಶುರುವಾದ ಟೂರ್ನಿಯಲ್ಲಿ ಆತಿಥೇಯ ಬಾಂಗ್ಲಾದೇಶ, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 49 ರನ್ ಗಳಿಂದ...

ಚಿತ್ತಗಾಂಗ್: ಬುಧವಾರ ಶುರುವಾದ ಟೂರ್ನಿಯಲ್ಲಿ ಆತಿಥೇಯ ಬಾಂಗ್ಲಾದೇಶ, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 49 ರನ್ ಗಳಿಂದ ಮಣಿಸಿತು.
ಎ ಗುಂಪಿನ ಪಂದ್ಯದಲ್ಲಿ ಗೆಲ್ಲಲು 241 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ 48.4 ಓವರ್ ಗಳಲ್ಲಿ 197 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಲಿಯಾಮ್ ಆಯಿತು. ಆರಂಭಿಕ ಲಿಯಾಮ್ ಸ್ಮಿತ್ ಶತಕದ ಹೊರತಾಗಿ ಮಿಕ್ಕವರು ಸ್ಥಿರ ಪ್ರದರ್ಶನದ ಅಭಾವ ಎದುರಿಸಿದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 7 ವಿಕೆಟ್ ಗೆ 240 ರನ್ ಮಾಡಿತು. ನಜ್ಮುಲ್ ಹುಸೇನ್ ಅವರ ಅರ್ಧಶತಕದ ಜತೆಗೆ ಮೇಲಿನ ಕ್ರಮಾಂಕದಲ್ಲಿ ಪಿನಾಕ್ ಘೋಷ್ ಮತ್ತು ಜಾಯ್ ರಾಜ್ ಶೇಖ್ 46 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ಬಾಂಗ್ಲಾ ಪರ ಅರ್ಧಶತಕ ಬಾರಿಸಿದ ನಜ್ಮುಲ್ ಹುಸೇನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮೆಹೆದಿ ಹಸನ್ ಮಿರಾಜ್, ಮೊಹಮ್ಮದ್ ಶಫೀಯುದ್ದೀನ್ ತಲಾ 3 ವಿಕೆಟ್ ಪಡೆದರೆ, ಸಯೀದ್ ಸರ್ಕಾರ್ ಹಾಗೂ ಸಾಲೆಹ್ ಅಹಮ್ಮದ್ ತಲಾ 2 ವಿಕೆಟ್ ಪಡೆದು ಹರಿಣಗಳನ್ನು ನಿಯಂತ್ರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


