ಎಂಇಜಿಗೆ ರೋಚಕ ಜಯ
ಎಂಇಜಿ ಅಂಡ್ ಸೆಂಟರ್ ತಂಡ ಬಿಡಿಎಎಫ್ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ 1-0 ಗೋಲಿನ ಅಂತರದಿಂದ ಎಎಸ್‍ಸಿ ತಂಡದ ವಿರುದ್ಧ ರೋಚಕ ಜಯ ಪಡೆಯಿತು.

ಬೆಂಗಳೂರು: ಪಂದ್ಯದ ಆರಂಭಿಕ ಹಂತದಲ್ಲಿ ನುಗೆರಿಲಾಲ್ ಹಮರ್ ಅವರ ಆಕರ್ಷಕ ಗೋಲಿನ ನೆರವಿನಿಂದ ಎಂಇಜಿ ಅಂಡ್ ಸೆಂಟರ್ ತಂಡ ಬಿಡಿಎಎಫ್ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ 1-0 ಗೋಲಿನ ಅಂತರದಿಂದ ಎಎಸ್‍ಸಿ ತಂಡದ ವಿರುದ್ಧ ರೋಚಕ ಜಯ ಪಡೆಯಿತು.
ಮಂಗಳವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಡಿವಿಷನ್ ಲೀಗ್ ಹಂತದ ಪಂದ್ಯದಲ್ಲಿ ಆರಂಭದಿಂದಲೇ ಎಎಸ್‍ಸಿ ತಂಡದ ಮೇಲೆ ನಿಯಂತ್ರಣ ಸಾಧಿಸಿದ ಎಂಇಜಿ ನಿಯಮಿತವಾಗಿ ಗೋಲಿಗಾಗಿ ದಾಳಿ ನಡೆಸಿತು. ಅದರ ಪರಿಣಾಮವಾಗಿ ಮೊದಲಾರ್ಧದಲ್ಲೇ ಎಂಇಜಿ ಗೋಲಿನ ರುಚಿಯುಂಡಿತು. ಪಂದ್ಯದ 12ನೇ ನಿಮಿಷದಲ್ಲಿ ನುಗೆರಿಲಾಲ್ ಹಮರ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಆರಂಭದಲ್ಲಿ ಸಿಕ್ಕ ಮುನ್ನಡೆಯನ್ನು ಅಂತಿಮ ಹಂತದವರೆಗೂ ಮುಂದುವರಿಸಿದ ಎಂಇಜಿ ಜಯದ ನಗೆ ಬೀರಿತು.
ಎಡಿಇಗೆ ಭರ್ಜರಿ ಜಯ: ಇನ್ನು ಇದಕ್ಕೂ ಮುನ್ನ ನಡೆದ ಎ ಡಿವಿಷನ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಎಡಿಇ ತಂಡ ಭರ್ಜರಿ ಜಯ ಸಂಪಾದಿಸಿತು. ಯಂಗ್ ಚಾಲೆಂಜರ್ ವಿರುದ್ಧದ ಪಂದ್ಯದಲ್ಲಿ ಆರಂಭದಿಂದ ಅಂತಿಮ ಹಂತದವರೆಗೂ ಪೂರ್ಣ ಪ್ರಾಬಲ್ಯ ಮೆರೆದ ಎಡಿಇ 4-೦ ಗೋಲುಗಳ ಅಂತರದಲ್ಲಿ ಜಯಿಸಿತು. ಎಡಿಇ ತಂಡದ ಪರ ಪ್ರೇಮ್ ೫೮ ಮತ್ತು 63ನೇ, ನಿಕ್ಕಿ 68ನೇ ಹಾಗೂ ಕಪಿಲನ್ 79ನೇ ನಿಮಿಷದಲ್ಲಿ ತಲಾ
ಒಂದೊಂದು ಗೋಲು ದಾಖಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


