ಕ್ರೀಡೆ

ಯುವರಾಜ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಯುವರಾಜ್ ಸಿಂಗ್ ಅವರ ಟಿ-20 ವಿಶ್ವದಾಖಲೆಯನ್ನು ಸಮಗಟ್ಟಿದ್ದಾರೆ...

ಯುವರಾಜ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಕ್ರಿಸ್ ಗೇಲ್
ಕ್ರಿಸ್ ಗೇಲ್
Published On :

ಮೆಲ್ಬೋರ್ನ್: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಯುವರಾಜ್ ಸಿಂಗ್ ಅವರ ಟಿ-20 ವಿಶ್ವದಾಖಲೆಯನ್ನು ಸಮಗಟ್ಟಿದ್ದಾರೆ.

ಬಿಗ್ ಬಾಷ್ ಲೀಗ್(ಬಿಬಿಎಲ್) ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಯುವರಾಜ್ ಸಿಂಗ್ ದಾಖಲೆಗೆ ಸಮಗಟ್ಟಿದ್ದಾರೆ.

ಮೆಲ್ಬೋರ್ನ್ ರೆನೆಗೇಡೆಸ್ ಪರ ಆಡುವ ಕ್ರಿಸ್ ಗೇಲ್ ಸ್ಪಿನ್ನರ್ ಟ್ರಾವಿಸ್ ಹೆಡ್ (ಅಡಿಲೇಡ್ ಸ್ಟ್ರೈಕರ್ಸ್) ಅವರ ಓವರ್ ನಲ್ಲಿ ಭರ್ಜರಿಯಾಗಿ ಆಡಿದ್ದಾರೆ. ಡಾಕ್ ಲ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೇಲ್ 7 ಸಿಕ್ಸರ್ ಹಾಗೂ 2 ಬೌಂಡರಿ ಸೇರಿ ಒಟ್ಟಾರೆ 17 ಎಸೆತಗಳಲ್ಲಿ 56 ರನ್ ಚೆಚ್ಚಿದರು.

ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ 2007ರಲ್ಲಿ ನಡೆದ ಐಸಿಸಿ ವಿಶ್ವ ಟಿ20 ಚಾಂಪಿಯನ್ ಶಿಪ್ ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ 36ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದ ಯುವರಾಜ್ ಅವರು ವೇಗವಾಗಿ ಅರ್ಧಶತಕ ಬಾರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.