ಬಿಎಫ್ ಸಿ ಪಂದ್ಯ ರೋಚಕ ಡ್ರಾ
ಕೊನೆಯ ನಿಮಿಷದವರೆಗೂ ರೋಮಾಂಚನ ಕಾಯ್ದುಕೊಂಡ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಹಾಗೂ ಓಜೋನ್ ಫುಟ್ಬಾಲ್ ಕ್ಲಬ್ ನಡುವಣದ ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯ ಕೊನೆಗೂ 11ರ ಸಮಬಲದಲ್ಲಿ ಡ್ರಾ ಆಯಿತು...

ಬೆಂಗಳೂರು: ಕೊನೆಯ ನಿಮಿಷದವರೆಗೂ ರೋಮಾಂಚನ ಕಾಯ್ದುಕೊಂಡ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಹಾಗೂ ಓಜೋನ್ ಫುಟ್ಬಾಲ್ ಕ್ಲಬ್ ನಡುವಣದ ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯ ಕೊನೆಗೂ 11ರ ಸಮಬಲದಲ್ಲಿ ಡ್ರಾ ಆಯಿತು.
ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಪಂದ್ಯ ತೀವ್ರ ಸ್ಪರ್ಧಾತ್ಮಕತೆಯಿಂದ ಕೂಡಿತ್ತು. ಗೋಲು ಗಳಿಸಲು ಎರಡೂ ತಂಡಗಳ ಆಟಗಾರರು ನಡೆಸಿದ ಯತ್ನಗಳು ವಿಫಲ ವಾದವು. ಚುರುಕುತನ, ತಂತ್ರಗಾರಿಕೆ, ಪರಸ್ಪರರ ಯೋಜನೆಗಳನ್ನು ಹಿಮ್ಮೆಟ್ಟಿಸುವುದು ಈ ಎಲ್ಲಾ ವಿಧಾನಗಳಲ್ಲಿ ಪರಸ್ಪರ ಪೈಪೋಟಿ ನೀಡಿದ ಆಟಗಾರರು ಒಬ್ಬರ ಮೇಲೊಬ್ಬರು ಸವಾಲೆಸೆದರು. ಬಿಎಫ್ ಸಿ ಪರ ಆ್ಯಂಟೊ 88ನೇ ನಿಮಿಷದಲ್ಲಿ, ಓಜೋನ್ ಪರ ಕ್ಸೇವಿಯರ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಎಡಿಇ ತಂಡಕ್ಕೆ ಭರ್ಜರಿ ಜಯ ಸೂಪರ್ ಡಿವಿಷನ್ ಪಂದ್ಯಕ್ಕೂ ಮುನ್ನ ನಡೆದ `ಎ' ಡಿವಿಷನ್ ಲೀಗ್ ಪಂದ್ಯದಲ್ಲಿ ಎಡಿಇ, ಎಲ್ಆರ್ಡಿಇ ತಂಡದ ವಿರುದ್ಧ 41 ಗೋಲುಗಳ ಗೆಲುವು ಸಾಧಿಸಿತು. ಎಡಿಇ ಪರ ಪ್ರೇಮ್ (52ನೇ ನಿ.), ರಿಚರ್ಡ್ (57 ಹಾಗೂ 63 ನಿ.) ಹಾಗೂ ಆ್ಯಂಟನಿ (69) ಗೋಲು ದಾಖಲಿಸಿದರೆ, ಎಲ್ ಆರ್ಡಿಇ ಪರ ದಾಖಲಾದ ಏಕೈಕ ಗೋಲು ರವಿ (58ನೇ ನಿ.) ಅವರಿಂದ ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


