ಕ್ರೀಡೆ

ಪವಾರ್ ಪರ ಎಂಸಿಎ ಬ್ಯಾಟಿಂಗ್

ಬಿಸಿಸಿಐ ಆಡಳಿತ ಸುಧಾರಣೆಗಾಗಿ ನಿವೃತ್ತ ನ್ಯಾ. ಆರ್.ಎಂ. ಲೋಧಾ, ಇತ್ತೀಚೆಗೆ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಶಿಫಾರಸುಗಳಲ್ಲಿ ಬಹುತೇಕ ಅಂಶಗಳನ್ನು ವಿರೋಧಿಸಿ...

ಪವಾರ್ ಪರ ಎಂಸಿಎ ಬ್ಯಾಟಿಂಗ್
ಶರದ್ ಪವಾರ್
Published On :
ಮುಂಬೈ: ಬಿಸಿಸಿಐ ಆಡಳಿತ ಸುಧಾರಣೆಗಾಗಿ ನಿವೃತ್ತ ನ್ಯಾ. ಆರ್.ಎಂ. ಲೋಧಾ, ಇತ್ತೀಚೆಗೆ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಶಿಫಾರಸುಗಳಲ್ಲಿ ಬಹುತೇಕ ಅಂಶಗಳನ್ನು ವಿರೋಧಿಸಿ ಸರ್ವೋಚ್ಛ ನ್ಯಾಯಾಲಯ ದಲ್ಲಿ ಮೇಲ್ಮನವಿ ಸಲ್ಲಿಸಲು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ನಿರ್ಧರಿಸಿದೆ ಎಂದು ಎಂಸಿಎ ಜಂಟಿ ಕಾರ್ಯದರ್ಶಿ ಪಿ.ವಿ. ಶೆಟ್ಟಿ ತಿಳಿಸಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನಲ್ಲಿ 70 ವಯಸ್ಸು ದಾಟಿದ ವ್ಯಕ್ತಿಗಳಿಗೆ ಬಿಸಿಸಿಐ ಅಧೀನ ಕ್ರಿಕೆಟ್ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಹೊರಗಿಡಬೇಕೆಂದು ಸೂಚಿಸಿದೆ. ಇದು ಜಾರಿಯಾದರೆ, 75 ವರ್ಷ ವಯಸ್ಸಿನ ಶರದ್ ಪವಾರ್‍ಗೆ ಎಂಸಿಎ ಅಧ್ಯಕ್ಷ ಪದವಿ ತಪ್ಪಲಿದೆ. ಈ ಹಿನ್ನೆಲೆ ಯಲ್ಲಿ ಎಂಸಿಎ, ಲೋಧಾ ಸಮಿತಿ ಶಿಫಾರಸು ಪ್ರಶ್ನಿಸಿ, ಶರದ್ ಪವಾರ್ ಅವರಿಗೆ ಶೇ. 101ರಷ್ಟು ಬೆಂಬಲ ನೀಡುವುದಾಗಿ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.