ಕ್ರೀಡೆ

ಭೂಪತಿ ಜೋಡಿಗೆ ಸೋಲಿನ ಆಘಾತ

ಭಾರತದ ಹಿರಿಯ ಡಬಲ್ಸ್ ಪ್ರವೀಣ ಮಹೇಶ್ ಭೂಪತಿ ಈ ಋತುವಿನ ಮೊಟ್ಟಮೊದಲ ಎಟಿಪಿ ಪಂದ್ಯಾವಳಿ ಚೆನ್ನೈ ಓಪನ್‍ನಿಂದ ಹೊರಬಿದ್ದಿದ್ದಾರೆ.

ಭೂಪತಿ ಜೋಡಿಗೆ ಸೋಲಿನ ಆಘಾತ
ಚೆನ್ನೈ ಓಪನ್‍ ಪಂದ್ಯಾವಳಿ
Published On :

ಚೆನ್ನೈ: ಭಾರತದ ಹಿರಿಯ ಡಬಲ್ಸ್ ಪ್ರವೀಣ ಮಹೇಶ್  ಭೂಪತಿ ಈ ಋತುವಿನ ಮೊಟ್ಟಮೊದಲ ಎಟಿಪಿ ಪಂದ್ಯಾವಳಿ ಚೆನ್ನೈ ಓಪನ್‍ನಿಂದ ಹೊರಬಿದ್ದಿದ್ದಾರೆ.
ಮಂಗಳವಾರ ತಡರಾತ್ರಿ ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರೀಕ್ವಾರ್ಟರ್  ಫೈನಲ್ ಪಂದ್ಯದಲ್ಲಿ ಲುಕ್ಸೆಂಬರ್ಗ್‍ನ ಗಿಲ್ಲೆಸ್ ಮತ್ತು ಭೂಪತಿ ಜೋಡಿ ಅಗ್ರಶ್ರೇಯಾಂಕಿತ ಜೋಡಿ ರಷ್ಯಾದ ರವೀನ್ ಕ್ಲಾಸೆನ್ ಹಾಗೂ ಅಮೆರಿಕದ ರಾಜೀವ್ ರಾಮ್  ವಿರುದ್ಧ ಕಠಿಣ ಹೋರಾಟ ನಡೆಸಿ ಅಂತಿಮವಾಗಿ ಸೂಪರ್ ಟೈ ಬ್ರೇಕರ್ ನಲ್ಲಿ 3-6, 7-6 (7) ಮತ್ತು 7-10 ಸೆಟ್ ಗಳಲ್ಲಿ ಸೋಲನುಭವಿಸಿತು.
ಸೋಮ ದೇವ್ ಪರಾಭವ: ಇನ್ನು ವಿಶ್ವದ 177ನೇ ಶ್ರೇಯಾಂಕಿತ ಆಟಗಾರ ಸೋಮ್ ದೇವ್ ದೇವ್‍ವರ್ಮನ್ ರಷ್ಯಾದ ವೈಲ್ಡ್ ಕಾರ್ಡ್ ಸ್ಪರ್ಧಿ ಆಂಡ್ರೆ ರುಬ್ಲೆವ್ ಎದುರು ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 3-6, 6-3, 3-6 ಸೆಟ್‍ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರೆ, ಡೇನಿಯಲ್ ಗಿಮೆನೊ ವಿರುದ್ಧ ರಾಮ್ ಕುಮಾರ್ ರಾಮನಾಥನ್ 6-2, 6-0 ಸೆಟ್‍ಗಳಿಂದ ಜಯಿಸಿದರು.ಇನ್ನು ಪುರುಷರ ಡಬಲ್ಸ್‍ನಲ್ಲಿ ಪೇಸ್ ಮತ್ತು ಗ್ರಾನೊಲರ್ಸ್ ಜೋಡಿ 6-2, 6-3 ಅಂತರದಲ್ಲಿ ಡೇನಿಯಲ್ ಜಾನ್ ಜೋಡಿಯನ್ನು ಮಣಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.