ಕರ್ನಾಟಕಕ್ಕೆ ಸತತ ಎರಡನೇ ಜಯ
ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ...

ಬೆಂಗಳೂರು: ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ.
ಸೋಮವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ
ಕರ್ನಾಟಕ ತಂಡ 3-0 (25-19, 25-23, 27-25) ಸೆಟ್‍ಗಳ ಅಂತರದಲ್ಲಿ ಜಯಿಸಿತು. ತೀವ್ರ
ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ಯಾವುದೇ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳದೇ ಆಡುವ ಮೂಲಕ ಜಯ ಸಾಧಿಸಿತು.
ಕರ್ನಾಟಕ ತಂಡದ ಪರ ನಾಯಕ ಕಾರ್ತಿಕ್, ಭರತ್ ಮತ್ತು ಶರತ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಜಯದೊಂದಿಗೆ ಕರ್ನಾಟಕ ತಂಡ ಸತತ ಎರಡನೇ ಜಯ ಸಾಧಿಸಿದ್ದು, ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಆರಂಭದಲ್ಲಿ ಸುಲಭ ಮುನ್ನಡೆ ಸಾಧಿಸಿದ ಕರ್ನಾಟಕ ಆಟಗಾರರು 25-19 ಅಂತರದ ಮೇಲುಗೈ ಸಾಧಿಸಿದರು. ನಂತರ ಎದುರಾಳಿಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾದ ಪರಿಣಾಮ ಎರಡನೇ ಸೆಟ್‍ನಲ್ಲಿ 25-23 ಅಂತರದ ರೋಚಕ ಮುನ್ನಡೆ ಪಡೆದರು. ಮೂರನೇ ಸೆಟ್‍ನಲ್ಲಿ ನೀಡಿದ ಸರ್ವೀಸಸ್
ಆಟಗಾರರು ಮತ್ತಷ್ಟು ಹೋರಾಟ ನೀಡಿದ ಪರಿಣಾಮ ರಾಜ್ಯ ತಂಡ 27-25ರ ಮುನ್ನಡೆ ಪಡೆಯಬೇಕಾಯಿತು.
ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡ 3-1 (20-25, 25-20, 26-24, 25-19) ಸೆಟ್‍ಗಳ ಅಂತರದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿತು. ಪಂದ್ಯದ
ಆರಂಭದಲ್ಲಿ ತಂಡ ನಿರಾಸೆ ಅನುಭವಿಸಿದರೂ ನಂತರ ಚೇತರಿಕೆ ಕಂಡಿತು. ಆರಂಭದಲ್ಲಿ
ಮುಗ್ಗರಿಸಿದ ತಮಿಳುನಾಡು ತಂಡ 20-25 ಅಂತರದ ಹಿನ್ನಡೆ ಅನುಭವಿಸಿತು. ಎರಡನೇ
ಸೆಟ್‍ನಲ್ಲಿ ತನ್ನ ಲಯ ಕಂಡುಕೊಂಡ ತಮಿಳುನಾಡು 25-20ರ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿತು. ನಂತರದ ಎರಡು ಸೆಟ್‍ಗಳಲ್ಲೂ ಬಿಗಿ ಹಿಡಿತ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡಿತು. ಇನ್ನು ಮಹಿಳೆಯರ ವಿಭಾಗದ ಪಂದ್ಯದಲ್ಲಿ ರೈಲೇಸ್ ತಂಡ ಪಂಜಾಬ್ ವಿರುದ್ಧ 3-0 (25-9, 25-3, 25-10) ಸೆಟ್‍ಗಳಿಂದ ಸುಲಭ ಜಯ
ತನ್ನದಾಗಿಸಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


