ಕ್ರೀಡೆ

ಇಂಡೋ-ಪಾಕ್ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಗೆ ಭಾರಿ ಬೇಡಿಕೆ

ಏಷ್ಯಾಕಪ್ ಟಿ20 ಸರಣಿಯಲ್ಲಿ ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ರೋಚಕ ಅಂತ್ಯಕಾಣುತ್ತಿದ್ದಂತೆಯೇ ಐಸಿಸಿ ವಿಶ್ವಕಪ್ ನಲ್ಲಿ ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯಕ್ಕೂ ಈಗಾಗಲೇ ವ್ಯಾಪಕ ಬೇಡಿಕೆ ಬಂದಿದೆ...

ಇಂಡೋ-ಪಾಕ್ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಗೆ ಭಾರಿ ಬೇಡಿಕೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ (ಸಂಗ್ರಹ ಚಿತ್ರ)
Published On :

ಧರ್ಮಶಾಲಾ: ಏಷ್ಯಾಕಪ್ ಟಿ20 ಸರಣಿಯಲ್ಲಿ ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ರೋಚಕ ಅಂತ್ಯಕಾಣುತ್ತಿದ್ದಂತೆಯೇ ಐಸಿಸಿ ವಿಶ್ವಕಪ್ ನಲ್ಲಿ ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೋ-ಪಾಕ್  ಪಂದ್ಯಕ್ಕೂ ಈಗಾಗಲೇ ವ್ಯಾಪಕ ಬೇಡಿಕೆ ಬಂದಿದೆ.

ಐಸಿಸಿ ಮೂಲಗಳ ಪ್ರಕಾರ ಮುಂದಿನ ತಿಂಗಳು ಅಂದರೆ ಮಾರ್ಚ್ 19ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯದ ಟಿಕೆಟ್ ಗಾಗಿ ಭಾರಿ ಬೇಡಿಕೆ ಹೆಚ್ಚಿದೆ. ಪಂದ್ಯದ  ಟಿಕೆಟ್ ಗಾಗಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಐಸಿಸಿ ಹೇಳಿತ್ತು. ಅದರಂತೆ ಕಳೆದ 2 ದಿನಗಳಲ್ಲಿ ಟಿಕೆಟ್ ಗಾಗಿ 1.38 ಲಕ್ಷ ನೋಂದಣಿ ದಾಖಲಾಗಿದೆ ಎಂದು ಹಿಮಾಚಲ ಪ್ರದೇಶ   ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

ನೋಂದಣಿ ಸಮಯ ಮುಕ್ತಾಯವಾದ ನಂತರ ಲಾಟರಿ ಮೂಲಕ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಅದರಲ್ಲಿ 1.15 ಲಕ್ಷ ಟಿಕೆಟ್ ಗೆ ಮೊದಲ ದಿನವೇ ಬೇಡಿಕೆ ಬಂದಿತ್ತು. ಮಾರ್ಚ್ 2ರವರೆಗೆ  ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಜನ ಪಂದ್ಯ ವೀಕ್ಷಿಸಬೇಕು ಎನ್ನುವ ಕಾರಣಕ್ಕೆ ಒಬ್ಬ ವ್ಯಕ್ತಿಗೆ ಗರಿಷ್ಠ 2 ಟಿಕೆಟ್ ಮಾತ್ರ  ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.